Bengaluru, ಫೆಬ್ರವರಿ 1 -- ಫೆಬ್ರವರಿ 14 ಬಂತೆಂದರೆ ಪ್ರೇಮಿಗಳಿಗೆ ಹಬ್ಬದ ಖುಷಿ. ಆ ದಿನವನ್ನು ಸಂಭ್ರಮಿಸಲು ವಿವಿಧ ರೀತಿಯ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಅದರಲ್ಲೂ ಉಡುಗೊರೆ ಕೊಡುವ ಮೂಲಕ ಪರಸ್ಪರ ಪ್ರೀತಿಯನ್ನು ವ್ಯಕ್ತಿಪಡಿಸುತ್ತಾರೆ. ಪ್ರೇಮಿಗಳ ದಿನಾಚರಣೆಯ ಸಂದರ್ಭದಲ್ಲಿ ಹುಡುಗನು, ಹುಡುಗಿಗೆ ಉಡುಗೊರೆ ಕೊಡಲು ಹಲವು ರೀತಿಯ ಆಯ್ಕೆಗಳು ಇರುತ್ತವೆ. ಮಳಿಗೆಗಳಲ್ಲಿ ಕೂಡ ಹುಡುಗಿಯರಿಗೆ ಕೊಡಬಹುದಾದ ಗಿಫ್ಟ್‌ಗಳ ಪಟ್ಟಿಯೇ ದೊಡ್ಡದಿರುತ್ತದೆ. ಅಲ್ಲದೆ, ಹುಡುಗಿಗೆ ಕೊಡಬಹುದಾದ ಗಿಫ್ಟ್‌ಗಳ ಕುರಿತು ಬಹುತೇಕ ಎಲ್ಲರೂ ಪ್ಲ್ಯಾನ್, ಐಡಿಯಾ ಹೇಳಿಕೊಡುತ್ತಾರೆ. ಆದರೆ, ಹುಡುಗಿಯು ಹುಡುಗನಿಗೆ ಕೊಡಬಹುದಾದ ಗಿಫ್ಟ್ ವಿಚಾರಕ್ಕೆ ಬಂದರೆ, ಅಲ್ಲಿ ಆಕೆಗೆ ಸೀಮಿತ ಆಯ್ಕೆಗಳು ಕಾಣಿಸುತ್ತವೆ. ಶಾಪಿಂಗ್ ಮಳಿಗೆಗಳಲ್ಲೂ ಅಷ್ಟೇ.. ಹುಡುಗನಿಗೆ ಕೊಡಬಹುದಾದ ಗಿಫ್ಟ್ ಸೀಮಿತವಾಗಿರುತ್ತದೆ. ಹುಡುಗಿಗೆ ಕೊಡುವ ಗಿಫ್ಟ್‌ಗಳದ್ದೇ ರಾಶಿ ಇರುತ್ತದೆ.

ಹುಡುಗರು ಸಾಮಾನ್ಯವಾಗಿ ಗಿಫ್ಟ್ ಸ್ವೀಕರಿಸುವುದನ್ನು ಇಷ್ಟಪಡುವುದಿಲ್ಲ. ಆದರೆ, ಯಾರಾದರೂ ಪ್ರೀ...