Bangalore, ಫೆಬ್ರವರಿ 14 -- ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಶುಕ್ರವಾರ ಪ್ರೇಮಿಗಳ ದಿನದ ಚಟುವಟಿಕೆ ನಡೆಯುತ್ತಿವೆ. ಹೊಟೇಲ್‌, ಕೆರೆ, ಪ್ರವಾಸಿ ತಾಣಗಳಲ್ಲಿ ಪ್ರೇಮಿಗಳು ಕೈ ಹಿಡಿದು ಕುಳಿತಿರುವ ಚಿತ್ರಣ ಕಾಣಸಿಗುತ್ತಿದೆ. ಇದೇ ದಿನ ಬೆಂಗಳೂರು ನಗರದ ಕೆಲವೆಡೆ ಅಂಟಿಸಿರುವ ಪೋಸ್ಟರ್‌ಗಳೂ ಗಮನ ಸೆಳೆಯುತ್ತಿವೆ. ಒಂದಷ್ಟು ಕಡೆ ವಿವಾದವನ್ನೂ ಸೃಷ್ಟಿಸಿವೆ. ಅದು ಬಾಯ್‌ಫ್ರೆಂಡ್‌ ಬಾಡಿಗೆ ಸೇವೆ. ನಿಮಗೆ ಬಾಯ್‌ಫ್ರೆಂಡ್‌ ಬೇಕೇ. ಹಾಗಾದರೆ ಬರೀ 389 ರೂ.ಪಾವತಿಸಿ ಬಾಯ್‌ಫ್ರೆಂಡ್‌ ಸೇವೆ ಪಡೆಯಿರಿ ಎನ್ನುವ ಸಾಲುಗಳುಳ್ಳ ಪೋಸ್ಟರ್‌ಗಳು ಅವು. ಬೆಂಗಳೂರಿನ ಪ್ರಮುಖ ಭಾಗದ ಗೋಡೆಗಳ ಮೇಲೆ ಕೇವಲ 389 ರೂ.ಗೆ 'ರೆಂಟ್ ಎ ಬಾಯ್‌ಫ್ರೆಂಡ್' ಸೇವೆಯ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಈ ಪೋಸ್ಟರ್‌ಗಳು ಸ್ಕ್ಯಾನ್ ಮಾಡಬಹುದಾದ ಕೋಡ್ ಮತ್ತು 'ದಿಸ್ ವ್ಯಾಲೆಂಟೈನ್ಸ್ ಡೇ, ರೆಂಟ್ ಎ ಬಾಯ್‌ಫ್ರೆಂಡ್, ಸ್ಕ್ಯಾನ್ ಮಿ' ಎಂಬ ಅಡಿಬರಹವನ್ನು ಒಳಗೊಂಡಿವೆ.

ಇದು ವಿವಾದ ಸ್ವರೂಪ ಪಡೆದಿದ್ದು, ಹೀಗೆ ಪೋಸ್ಟರ್‌ ಅಂಟಿಸುವುದು ಸರಿಯಲ್ಲ. ಇದು ನಮ್ಮ ...