ಭಾರತ, ಜನವರಿ 27 -- ಈ ಜಗತ್ತಿನ ಅತಿ ಸುಂದರ ಸಂಬಂಧ ಎಂದರೆ ಅದು ಪ್ರೇಮ ಸಂಬಂಧ. ರಾಧಾ-ಕೃಷ್ಣ, ದೇವದಾಸ್‌-ಪಾರು, ಲೈಲಾ ಮಜ್ನು ಹೀಗೆ ಪ್ರೀತಿಯನ್ನೇ ಬದುಕು ಎಂದುಕೊಂಡು ಪ್ರೀತಿಯನ್ನೇ ಉಸಿರನ್ನಾಗಿಸಿಕೊಂಡಿದ್ದ ಅದೆಷ್ಟೋ ಪ್ರೇಮಕಥೆಗಳನ್ನು ನಾವು ಕೇಳಿದ್ದೇವೆ. ಪ್ರೀತಿಗೆ ಎಲ್ಲವನ್ನೂ ಕೊನೆಗೆ ಜಗತ್ತನ್ನೂ ಸೋಲಿಸುವ ಶಕ್ತಿ ಇದೆ. ಇಂತಹ ಸುಂದರ ಪ್ರೇಮವನ್ನು ಸಂಭ್ರಮಿಸುವ ಒಂದು ದಿನ ಇದೆ. ಅದುವೇ ಪ್ರೇಮಿಗಳ ದಿನ.

ಫೆಬ್ರುವರಿ ತಿಂಗಳು ಬಂತೆಂದರೆ ಪ್ರೇಮಿಗಳ ದಿನದ ಸಂಭ್ರಮ ಶುರುವಾಗುತ್ತದೆ. ಎಲ್ಲೆಲ್ಲೂ ಅರಳಿ ನಗುವ ಕೆಂಗುಲಾಬಿಗಳು ಪ್ರೇಮಿಗಳ ಕೈ ಸೇರಲು ತವಕಿಸುತ್ತವೆ. ಚಾಕೊಲೇಟ್‌ನ ಘಮದೊಂದಿಗೆ ಗ್ರೀಟಿಂಗ್ ಕಾರ್ಡ್‌ನಲ್ಲಿನ ಸುಂದರ ಪ್ರೇಮ ಕವಿತೆಗಳು ಜೊತೆಯಾಗುತ್ತದೆ. ಫೆಬ್ರುವರಿ ತಿಂಗಳು ಪ್ರೇಮಿಗಳಿಗೆ ಬಹಳ ವಿಶೇಷ. ಹಲವರು ತಮ್ಮ ಮನದ ಭಾವನೆಯನ್ನು ಹಂಚಿಕೊಳ್ಳಲು ಪ್ರೇಮಿಗಳ ದಿನಕ್ಕಾಗಿ ಕಾಯುತ್ತಿರುತ್ತಾರೆ. ಹಾಗಾದರೆ ಪ್ರೇಮಿಗಳ ದಿನ ಯಾವಾಗ, ಈ ದಿನದ ಆಚರಣೆ ಹೇಗೆ ಶುರುವಾಯ್ತು, ಇದರ ಹಿಂದಿನ ಇತಿಹಾಸವೇನು ಎಂಬ ವಿವರ ಇಲ್...