ಭಾರತ, ಫೆಬ್ರವರಿ 9 -- ಪ್ರೇಮಿಗಳ ದಿನ ಹತ್ತಿರದಲ್ಲಿದೆ. ಈಗಾಗಲೇ ಪ್ರೇಮಿಗಳ ವಾರ ಆರಂಭವಾಗಿದ್ದು ರೋಸ್‌ ಡೇ, ಪ್ರಪೋಸ್‌ ಡೇ, ಚಾಕೊಲೇಟ್‌ ಡೇ ಹೀಗೆ ನಡೆಯುತ್ತಿದೆ. ಪ್ರಪಂಚದಾದ್ಯಂತ ಪ್ರೇಮಿಗಳು ಈ ವಿಶೇಷಗಳಲ್ಲಿ ಸಂಭ್ರಮ ಆಚರಿಸುತ್ತಿದ್ದಾರೆ. ಹೂವು, ಉಡುಗೊರೆ, ಗ್ರೀಟಿಂಗ್ ಕಾರ್ಡ್‌ಗಳನ್ನು ನೀಡುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೆಲ್ಲಾ ಎಲ್ಲಾ ದೇಶಗಳಲ್ಲೂ ಸಾಮಾನ್ಯವಾಗಿದ್ದರೂ ಕೆಲವು ದೇಶಗಳಲ್ಲಿ ಪ್ರೇಮಿಗಳ ದಿನವನ್ನು ಬಹಳ ವಿಭಿನ್ನವಾಗಿ ಆಚರಿಸಲಾಗುತ್ತದೆ. ಈ ದೇಶಗಳಲ್ಲಿ ವಿಭಿನ್ನ ಸಂಪ್ರದಾಯದ ಮೂಲಕ ಪ್ರೇಮಿಗಳ ದಿನವನ್ನು ಸಂಭ್ರಮಿಸಲಾಗುತ್ತದೆ.

ಪ್ರಪಂಚದಾದ್ಯಂತ ಹಲವು ದೇಶಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆಯಾದರೂ, ಎಲ್ಲಾ ಸ್ಥಳಗಳಲ್ಲೂ ಒಂದೇ ರೀತಿಯಲ್ಲಿ ಅಥವಾ ಒಂದೇ ದಿನಾಂಕದಂದು ಆಚರಿಸುವುದಿಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಪ್ರಪಂಚದಾದ್ಯಂತ ಹೇಗೆಲ್ಲಾ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ ಎಂಬುದನ್ನು ನೋಡಿ.

ಫಿನ್‌ಲ್ಯಾಂಡ್‌ನಲ್ಲಿ ಪ್ರೇಮಿಗಳ ದಿನ ಎಂದರೆ ಸ್ನೇಹಿತರ...