ಭಾರತ, ಫೆಬ್ರವರಿ 13 -- ವ್ಯಾಲೆಂಟೈನ್ಸ್‌ ಡೇ ಆಚರಣೆ ಇನ್ನೊಂದೇ ದಿನ ಬಾಕಿ. ಈಗಾಗಲೇ ರೋಸ್‌ ಡೇ, ಪ್ರಪೋಸ್‌ ಡೇ, ಹಗ್‌ ಡೇ ಎಲ್ಲವೂ ಮುಗಿದಿದೆ. ನಾಳೆ ಅಂದರೆ ಫೆ. 14 ಪ್ರೇಮಿಗಳ ದಿನ. ವರುಷಗಳು ಎಷ್ಟೇ ಕಳೆಯಲಿ ಈ ದಿನಕ್ಕಾಗಿ ಪ್ರೇಮಿಗಳು ಎದುರು ನೋಡುತ್ತಿರುತ್ತಾರೆ. ಪ್ರೇಮಲೋಕದಲ್ಲಿ ತೇಲಾಡುವವರಿಗೆ ಈ ದಿನ ಬಹಳ ವಿಶೇಷ. ಈ ದಿನದಂದು ತಮ್ಮ ಮನಸ್ಸಿಗೆ ಹತ್ತಿರವಾದ ವ್ಯಕ್ತಿಗೆ ವಿಶೇಷ ಉಡುಗೊರೆ ನೀಡುವ ಮೂಲಕ ಮನದಿಂಗಿತವನ್ನು ವ್ಯಕ್ತಪಡಿಸುತ್ತಾರೆ. ಪ್ರಪಂಚದಾದ್ಯಂತ ಫೆ. 14 ಪ್ರೇಮಿಗಳ ದಿನವಾದರೂ ಕೂಡ ಆಚರಣೆಯ ಕ್ರಮ ಮಾತ್ರ ದೇಶದಿಂದ ದೇಶಕ್ಕೆ ಭಿನ್ನವಾಗಿದೆ. ಯಾವ ಯಾವ ದೇಶದಲ್ಲಿ ಪ್ರೇಮಿಗಳ ದಿನವನ್ನು ಹೇಗೆ ಭಿನ್ನವಾಗಿ ಆಚರಿಸುತ್ತಾರೆ ಎನ್ನುವುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಫಿನ್‌ಲ್ಯಾಂಡ್‌ನಲ್ಲಿ ಪ್ರೇಮಿಗಳ ದಿನವನ್ನು ಸ್ನೇಹ ದಿನ ಎಂದು ಆಚರಿಸಲಾಗುತ್ತದೆ. ಈ ದಿನದಂದು ಫಿನ್‌ಲ್ಯಾಂಡ್‌ ಮಂದಿ ತಮ್ಮ ಸ್ನೇಹಿತರು ಹಾಗೂ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವುದು ಹಾಗೂ ನೆನಪಿನಲ್ಲಿ ಉಳಿಯುವ ಕ್ಷಣಗಳನ್ನು ಸೃಷ್ಟಿಸುವ...