ಭಾರತ, ಫೆಬ್ರವರಿ 11 -- ಪ್ರೇಮಿಗಳ ದಿನಕ್ಕೆ ಮೂರ್ನ್ಕಾಲು ದಿನಗಳು ಬಾಕಿ ಉಳಿದಿವೆ. ಈ ಸಂದರ್ಭ ಸಂಗಾತಿಯನ್ನು ಖುಷಿ ಪಡಿಸಲು ಅಥವಾ ಮನ ಮೆಚ್ಚಿದ ವ್ಯಕ್ತಿಯ ಮುಂದೆ ಪ್ರೇಮ ನಿವೇದನೆ ಮಾಡುವ ಮುನ್ನ ವಿಶೇಷವಾದ ಉಡುಗೊರೆ ಕೊಡಬೇಕು ಎಂದು ಮನಸ್ಸು ಬಯಸುವುದು ಸಹಜ. ಹಾಗಂತ ಏನು ಗಿಫ್ಟ್‌ ಕೊಡಲಿ ಅಂತ ಯೋಚಿಸುವವರೇ ಅನೇಕರು. ಹುಡುಗಿಯರಿಗೆ ಗಿಫ್ಟ್ ಕೊಡಲು ಸಾಕಷ್ಟು ಆಯ್ಕೆಗಳಿವೆ. ಆದರೆ ಗಂಡುಮಕ್ಕಳಿಗೆ ಗಿಫ್ಟ್ ಕೊಡಬೇಕು ಎಂದುಕೊಂಡಾಗ ಸಾಕಷ್ಟು ಯೋಚನೆ ಮಾಡಬೇಕಾಗುತ್ತದೆ.

ಗಂಡುಮಕ್ಕಳು ಪ್ರೇಯಸಿ, ಹೆಂಡತಿಯಷ್ಟೇ ಪ್ರೀತಿಸುವುದು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು. ಆ ಕಾರಣಕ್ಕೆ ನಿಮ್ಮ ಸಂಗಾತಿಗೆ ಸ್ಮಾರ್ಟ್ ಐಟಂಗಳನ್ನು ಗಿಫ್ಟ್ ರೂಪದಲ್ಲಿ ನೀಡಬಹುದು. ನಿಮ್ಮ ವ್ಯಾಲೆಂಟೈನ್‌ ಗೀಕಿ (ಟೆಕ್‌ ಪ್ರಿಯ) ಆಗಿದ್ದರೆ ಅವರಿಗೆ ಏನು ಗಿಫ್ಟ್ ಕೊಡಬಹುದು ಅಂತ ನೀವು ಯೋಚನೆ ಮಾಡ್ತಾ ಇದ್ರೆ ಗಮನಿಸಿ. ಈ ಗಿಫ್ಟ್ ಐಡಿಯಾಗಳು ನಿಮಗೆ ಇಷ್ಟವಾಗಬಹುದು.

ನಿಮ್ಮ ಸಂಗಾತಿ ಗೇಮಿಂಗ್ ಪ್ರಿಯನಾದರೆ, ಲೆಗೋ ಪ್ಯಾಕ್-ಮ್ಯಾನ್ ಆರ್ಕೇಡ್ ಬಿಲ್ಡಿಂಗ್ ಕಿಟ್...