ಭಾರತ, ಏಪ್ರಿಲ್ 15 -- Vaishnavi Gowda engagement: ಸೀತಾ ರಾಮ, ಅಗ್ನಿಸಾಕ್ಷಿ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ಕನ್ನಡ ನಟಿ ವೈಷ್ಣವಿ ಗೌಡ ಅವರು ವಾಯುಪಡೆಯ ಅನುಕೂಲ್‌ ಮಿಶ್ರಾ ಅವರ ಜತೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಏಪ್ರಿಲ್‌ 14ರಂದು ಇವರ ನಿಶ್ಚಿತಾರ್ಥ ನಡೆದಿದೆ. ಸೀರಿಯಲ್‌ ನಟಿಯ ಎಂಗೇಜ್‌ಮೆಂಟ್‌ ಕಾರ್ಯಕ್ರಮದಲ್ಲಿ ಕನ್ನಡದ ಹಲವು ನಟಿಯರು, ನಟರು ಭಾಗವಹಿಸಿದ್ದಾರೆ. ಅಮೂಲ್ಯ, ಪೂಜಾ ಲೋಕೇಶ್‌, ಜ್ಯೋತಿ ಕಿರಣ್‌, ರಿತು ಸಿಂಗ್‌, ಚೈತ್ರಾ ವಾಸುದೇವನ್‌ ಸೇರಿದಂತೆ ಅನೇಕ ಆಪ್ತರು ಎಂಗೇಜ್‌ಮೆಂಟ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ವೈಷ್ಣವಿ ಗೌಡ ಮದುವೆಯಾಗಲಿರುವ ಗಂಡು ಯಾರು ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿ ಇರಬಹುದು. ಅಗ್ನಿಸಾಕ್ಷಿ ಧಾರಾವಾಹಿ ನಟಿಯು ಕೇಂದ್ರ ಸರಕಾರದ ಉದ್ಯೋಗಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ಹೆಸರು ಅನುಕೂಲ್‌ ಮಿಶ್ರಾ. ಪ್ರೀತಿಯಿಂದ ಅಕಾಯ್‌ ಎಂದು ಇವರನ್ನು ಕರೆಯುತ್ತಾರೆ. ವಾಯುಪಡೆಯಲ್ಲಿ ಉದ್ಯೋಗಿಯಾಗಿರುವ ಅನುಕೂಲ್‌ ಮಿಶ್...