ಭಾರತ, ಫೆಬ್ರವರಿ 5 -- ಹಳೇ ಬೇರು ಹೊಸ ಚಿಗುರು ಎನ್ನುವ ಮಾತಿನಂತೆ ಕಿರುತೆರೆಯ ಹಿರಿಯರು ಮತ್ತು ಹೊಸ ಪ್ರತಿಭೆಗಳ ಅಭಿನಯದೊಂದಿಗೆ 'ವಧು' ಧಾರಾವಾಹಿ ಮೂಡಿ ಬರುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಆರಂಭವಾದ 'ವಧು' ಧಾರಾವಾಹಿಯ ನಾಯಕ ನಟ ಅಭಿಷೇಕ್ ಶ್ರೀಕಾಂತ್ (ಸಾರ್ಥಕ್) ಈ ಹಿಂದೆ ಲಕ್ಷಣ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ 'ವಧು' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ, ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಸಿನಿಮಾಗಳಲ್ಲೂ ಅಭಿನಯಿಸಿದ ಅನುಭವ ಇರುವ ನಟ ಅಭಿಷೇಕ್ ಶ್ರೀಕಾಂತ್ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಸುದ್ದಿ ತಾಣದ ಜತೆಗೆ ಮಾತನಾಡಿದ್ದು, ಧಾರಾವಾಹಿ ಮತ್ತು ಅವರ ವೈಯಕ್ತಿಕ ಬದುಕಿನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ

ಪ್ರಶ್ನೆ: ವಿಲನ್ ಆಗಿ ಅಭಿನಯಿಸಿದ ನೀವು ಈಗ ನಾಯಕ ನಟನ ಪಾತ್ರದಲ್ಲಿ ಅಭಿನಯಿಸುತ್ತಿದ್ದೀರಾ.. ಈ ಬದಲಾವಣೆ ನಿಮಗೆ ಹೇಗನಿಸುತ್ತಿದೆ?ಉತ್ತರ: ಹೌದು, ಈ ಹಿಂದೆ ನಾನು ಹೆಚ್ಚಾಗಿ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸಿನಿಮಾಗಳಲ್ಲೂ ನಾನ...