ಭಾರತ, ಏಪ್ರಿಲ್ 14 -- ಕಲರ್ಸ್ ಕನ್ನಡದಲ್ಲಿ ಕಳೆದ ಐದಾರು ತಿಂಗಳಿಂದೀಚೆಗೆ ಕೆಲವು ಹೊಸ ಧಾರಾವಾಹಿಗಳು ಪ್ರಸಾರ ಆರಂಭಿಸಿದ್ದವು. ಇದರಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದ್ದು ಡೈವೋರ್ಸ್ ಲಾಯರ್ ಮದುವೆ ಕಥೆ ಇರುವ ವಧು. ಮೇಕಿಂಗ್ ಪ್ರೋಮೊದ ಮೂಲಕ ಈ ಧಾರಾವಾಹಿ ನಿರೀಕ್ಷೆ ಹುಟ್ಟಿಸಿತ್ತು. ಜೊತೆಗೆ ಧಾರಾವಾಹಿಯಲ್ಲಿ ಹಲವು ಖ್ಯಾತ ನಟ, ನಟಿಯರು ನಟಿಸುತ್ತಿದ್ದಾರೆ. ಟಿಎಸ್‌ ಸೀತಾರಾಂ ಅವರು ಕೂಡ ಇದರಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದರು.

ವಿನಯಾ ಪ್ರಸಾದ್‌, ಸುಧಾ ಬೆಳವಾಡಿ ಮೊದಲಾದವರು ನಟಿಸುತ್ತಿರುವ ಡೈವೋರ್ಸ್ ಲಾಯರ್ ಮದುವೆ ಕಥೆ ಪ್ರೋಮೊದಲ್ಲಿ ನಿರೀಕ್ಷೆ ಹುಟ್ಟಿಸಿದಷ್ಟು ಧಾರಾವಾಹಿ ಆರಂಭವಾದ ಮೇಲೆ ಯಶಸ್ಸು ಕಾಣಲಿಲ್ಲ. ಆರಂಭದಿಂದಲೂ ಈ ಧಾರಾವಾಹಿ ಮೇಲೆ ಪ್ರೇಕ್ಷಕರು ಒಲವು ತೋರಲಿಲ್ಲ. ನಂತರ ಧಾರಾವಾಹಿ ಪ್ರಸಾರದ ಸಮಯ ಬದಲಾವಣೆ ಮಾಡಲಾಯಿತು. ಆದರೂ ಕಿರುತೆರೆ ಪ್ರೇಕ್ಷಕರು ಇದರತ್ತ ಒಲವು ತೋರಲಿಲ್ಲ.

ಶ್ರೀಕಾಂತ್‌, ದುರ್ಗಾಶ್ರೀ, ಸೋನಿ ಮುಲೆವಾ ಈ ಧಾರಾವಾಹಿಯಲ್ಲಿ ಹೈಲೈಟ್‌. ಈ ಮೂವರು ತಮ್ಮ ಪಾತ್ರಗಳನ್ನು ಅಚ್ಚುಕಟ...