Bengaluru, ಮಾರ್ಚ್ 3 -- Vadakkan Movie: ಕನ್ನಡದ ಪ್ರತಿಭಾನ್ವಿತ ನಟ ಕಿಶೋರ್‌ ಅಭಿನಯದ ಮಲಯಾಳಂ ಸಿನಿಮಾ ವಡಕ್ಕನ್‌ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ ಈ ಸಿನಿಮಾ ಅಮೆರಿಕದಲ್ಲಿ ನಡೆದ ಫ್ರೈಟ್‌ ನೈಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ "ಅತ್ಯುತ್ತಮ ಅಲೌಕಿಕ ಥ್ರಿಲ್ಲರ್‌" (Best Supernatural Thriller award) ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು. ಈ ಸಿನಿಮಾ ಮಾರ್ಚ್‌ 7, 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಕಿಶೋರ್‌ ಮತ್ತು ಶ್ರುತಿ ಮೆನನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ ಫ್ರೈಟ್‌ ನೈಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಪಡೆದ ಮೊದಲ ಮಲಯಾಳಂ ಸಿನಿಮಾ ಎಂಬ ಖ್ಯಾತಿಗೂ ವಡಕ್ಕನ್‌ ಕಳೆದ ವರ್ಷ ಪಾತ್ರವಾಗಿತ್ತು. ಹೀಗೆ, ಜಾಗತಿಕ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲು ಸಜ್ಜಾಗಿದೆ.

'ವಡಕ್ಕನ್' 2024ರ ಕ್ಯಾನೆಸ್ ಚಲನಚಿತ್ರೋತ್ಸವದ ಮಾರ್ಚ್ ಡು ಫಿಲ್ಮ್ ಇನ್ ದಿ ಫೆಂಟಾಸ್ಟಿಕ್ ಪೆವ...