ಭಾರತ, ಫೆಬ್ರವರಿ 5 -- ಕೃಷ್ಣ ಭಟ್‌ ಬರಹ: ಅಮೆರಿಕ ಅಧ್ಯಕ್ಷಷ ಡೊನಾಲ್ಡ್‌ ಟ್ರಂಪ್‌ ಅವರು ವಿದೇಶಗಳಲ್ಲಿ ಮಾನವೀಯ ನೆರವು ನೀಡುವ ಯುಎಸ್‌ಏಡ್‌ ಅನ್ನು ನಿಲ್ಲಿಸುವ ಮುಚ್ಚಲು ಹೊರಟಿದ್ದಾರೆ. ಇದು ಕೆಲವು ದೇಶಗಳಿಗೆ ಸಮಸ್ಯೆಯಾಗಬಹುದು. ಆದರೆ, ಅತ್ಯಂತ ಅನುಕೂಲ ಆಗುವುದು ಭಾರತಕ್ಕೆ ಎಂದು ಕೃಷ್ಣಭಟ್‌ ತನ್ನ ಸೋಷಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅವರ ಫೇಸ್‌ಬುಕ್‌ ಪೋಸ್ಟ್‌ ಅನ್ನು ಯತಾವತ್ತಾಗಿ ಮುಂದೆ ಪ್ರಕಟಿಸಲಾಗಿದೆ.

ಯುಎಸ್‌ಏಡ್ ಯೋಜನೆಯನ್ನು ಟ್ರಂಪ್ ನಿಲ್ಲಿಸಿದ್ದರಿಂದ ಕೆಲವು ದೇಶಗಳಲ್ಲಿ ಸಮಸ್ಯೆಯಾಗಬಹುದು. ಆದರೆ, ಅತ್ಯಂತ ಅನುಕೂಲ ಆಗುವುದು ಭಾರತಕ್ಕೆ!

ಕೋಲ್ಡ್ ವಾರ್ ಕಾಲದಲ್ಲಿ ಜಾನ್ ಎಫ್ ಕೆನಡಿ ಅಮೆರಿಕ ಪರವಾದ ಅಜೆಂಡಾವನ್ನು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಬಿತ್ತುವುದಕ್ಕೆ ಅಂತಲೇ ಈ ಸಂಸ್ಥೆಯನ್ನು ಶುರು ಮಾಡಿದರು. ಇದರಿಂದ ಅಮೆರಿಕಕ್ಕೆ ದೊಡ್ಡಣ್ಣನ ಸ್ಥಾನ ಸಿಕ್ಕಿತು. ಇದಕ್ಕೆ ಪರ್ಯಾಯವಾಗಿ ಆಗ ರಷ್ಯಾ ಕೂಡ ಭಾರಿ ಹಣ ಕೊಟ್ಟು ರಷ್ಯಾ ಪರವಾದ ಲಾಬಿ ನಡೆಸುತ್ತಿತ್ತು. ಆದರೆ, ರಷ್ಯಾ ಛಿದ್ರವಾಗಿ ಜಾಗ...