ಭಾರತ, ಫೆಬ್ರವರಿ 26 -- US Gold Card Citizenship: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ (ಫೆ 25) ವಲಸಿಗರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ ಹೊಸ 'ಗೋಲ್ಡ್ ಕಾರ್ಡ್‌' ಯೋಜನೆಯನ್ನು ಘೋಷಿಸಿದರು. 50 ಲಕ್ಷ ಅಮೆರಿಕನ್ ಡಾಲರ್‌ಗೆ (43.55 ಕೋಟಿ ರೂ) ಗೋಲ್ಡ್ ಕಾರ್ಡ್ ಅನ್ನು ಮಾರಾಟ ಮಾಡಲಾಗುತ್ತದೆ. ಇದು ಗ್ರೀನ್ ಕಾರ್ಡ್‌ನ ಪ್ರೀಮಿಯಂ ವರ್ಷನ್ ಎಂದು ಹೇಳಲಾಗುತ್ತಿದ್ದು, ಇದು ಹೂಡಿಕೆದಾರರಿಗೆ ಪೌರತ್ವವನ್ನು ನೀಡುವಂಥ ಯೋಜನೆಯಾಗಿದೆ.

"ನಾವು ಗೋಲ್ಡ್ ಕಾರ್ಡ್ ಮಾರಾಟ ಮಾಡಲು ಸಜ್ಜಾಗಿದ್ದೇವೆ. ನಿಮ್ಮ ಬಳಿ ಗ್ರೀನ್ ಕಾರ್ಡ್ ಇರಬಹುದು. ಆದರೆ ಇದು ಗೋಲ್ಡ್‌ ಕಾರ್ಡ್‌. ಈ ಗೋಲ್ಡ್‌ ಕಾರ್ಡ್‌ಗೆ ಒಂದು ದರ ನಿಗದಿ ಮಾಡಿದ್ದೇವೆ. 5 ಮಿಲಿಯನ್ ಡಾಲರ್‌ ಕೊಟ್ಟು ಈ ಗೋಲ್ಡ್ ಕಾರ್ಡ್ ತಮ್ಮದಾಗಿಸಿಕೊಳ್ಳಬಹುದು. ಈ ಗೋಲ್ಡ್ ಕಾರ್ಡ್‌ ಇದ್ದರೆ ನಿಮಗೆ ಗ್ರೀನ್‌ ಕಾರ್ಡ್‌ನ ಎಲ್ಲ ಸವಲತ್ತುಗಳು ಸಿಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮಂಗಳವಾರ ಘೋಷಿಸಿದರು. ಇದಕ್ಕೆ ಸಂಬಂಧಿಸಿದ ಎಕ್ಸಿಕ್ಯೂಟಿವ್ ಆರ್...