ಭಾರತ, ಫೆಬ್ರವರಿ 26 -- US Gold Card Visa: ಅಮೆರಿಕದ ಪೌರತ್ವ ಪಡೆಯಬೇಕು ಎಂದು ಬಹುತೇಕರು ಬಯಸುತ್ತಾರೆ. ಭಾರತೀಯರಂತೂ ಗ್ರೀನ್ ಕಾರ್ಡ್ ಪಡೆಯಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಇದಕ್ಕಾಗಿ ಇಬಿ 5 ಎಂಬ ಉಪಕ್ರಮವನ್ನು ಅಮೆರಿಕ ಸರ್ಕಾರ ಪರಿಚಯಿಸಿತು. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗೋಲ್ಡ್ ಕಾರ್ಡ್ ಎಂಬ ಹೊಸ ಉಪಕ್ರಮವನ್ನು ಘೋಷಿಸಿದ್ದಾರೆ. ಇದು ಇನ್ನೆರಡು ವಾರದಲ್ಲಿ ಜಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. ಇದು ಅತಿಶ್ರೀಮಂತ ವಲಸಿಗರನ್ನು ಗುರಿಯಾಗಿಸಿಕೊಂಡ ಉಪಕ್ರಮವಾಗಿದ್ದು, ಜಗತ್ತಿನ ಗಮನಸೆಳೆದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಲಸಿಗರ ಪೈಕಿ ಅತಿಶ್ರೀಮಂತರನ್ನು ಗುರಿಯಾಗಿಟ್ಟುಕೊಂಡು ಮಂಗಳವಾರ (ಫೆ 25) ಗೋಲ್ಡ್ ಕಾರ್ಡ್ ವೀಸಾ ಉಪಕ್ರಮ ಜಾರಿಗೊಳಿಸುವುದಕ್ಕೆ ಸಂಬಂಧಿಸಿದ ಎಕ್ಸಿಕ್ಯೂಟಿವ್ ಆರ್ಡರ್‌ಗೆ ಸಹಿ ಹಾಕಿದರು. ಕಾಮರ್ಸ್ ಸೆಕ್ರಟರಿ ಹೊವಾರ್ಡ್‌ ಲುತ್‌ನಿತ್ ಕೂಡ ಸಹಿ ಹಾಕಿದರು.

1) ಅಮೆರಿಕ ಗೋಲ್ಡ್ ಕಾರ್ಡ್ ವೀಸಾ- ವಲಸಿಗರ ಪೈಕಿ ಅತಿಶ್ರೀಮಂತರಿಗೆ ನೇರವಾಗಿ ಅಮೆರಿಕದ ಪ...