Bangalore, ಜನವರಿ 28 -- ಬೆಂಗಳೂರು: ಈಗಿನ ಡಿಜಿಟಲ್‌ ಇಂಡಿಯಾ ಕಾಲದಲ್ಲಿ ನೀವು ಈಗ ಎಟಿಎಂನಿಂದ ಹಣ ತೆಗೆಯುವುದು ಅಪರೂಪವಾಗಿರಬಹುದು. ಹಾಲು, ತರಕಾರಿ, ದಿನಸಿ, ರಿಚಾರ್ಜ್‌, ಟ್ಯಾಕ್ಸಿ, ಶಾಪಿಂಗ್‌ ಸೇರಿದಂತೆ ಪ್ರತಿದಿನ ಎಲ್ಲಾ ವ್ಯವಹಾರಕ್ಕೂ ಗೂಗಲ್‌ ಪೇ, ಫೋನ್‌ ಪೇ, ಭೀಮ್‌, ಪೇಟಿಎಂ ಇತ್ಯಾದಿಗಳನ್ನು ಬಳಸುತ್ತಿರಬಹುದು. ನೀವು ಮಾಡುವ ಪ್ರತಿಯೊಂದು ಯುಪಿಐ ಹಣ ವರ್ಗಾವಣೆಯಲ್ಲಿಯೂ ಒಂದು ವಹಿವಾಟು ಐಡಿ ದೊರಕುತ್ತದೆ. ಈ ಐಡಿಯು ಕೆಲವೊಮ್ಮೆ ಅಂಕೆಗಳನ್ನು, ಅಕ್ಷರಗಳನ್ನು ಹೊಂದಿರುತ್ತದೆ. ಕೆಲವೊಮ್ಮೆ ವಿಶೇಷ ಅಕ್ಷರಗಳನ್ನು (ಸ್ಪೆಷಲ್‌ ಕ್ಯಾರೆಕ್ಟರ್‌) ಹೊಂದಿರುತ್ತವೆ.

ಫೆಬ್ರವರಿ 1ರಿಂದ ವಿಶೇಷ ಅಕ್ಷರಗಳನ್ನು ಹೊಂದಿರುವ ಎಲ್ಲಾ ಯುಪಿಐ ವಹಿವಾಟುಗಳನ್ನು ನಿರಾಕರಿಸಲಾಗುತ್ತದೆ ಎಂದು ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ತನ್ನ ಸುತ್ತೊಲೆಯಲ್ಲಿ ತಿಳಿಸಿದೆ.

ಜನವರಿ 9ರ ಸುತ್ತೋಲೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಯುಪಿಐ ಐಡಿಗಳಲ್ಲಿ ಆಲ್ಫಾನ್ಯೂಮರಿಕ್ ಅಕ್ಷರಗಳನ್ನು ಮಾತ್ರ ಬಳಸುವಂತ...