Bangalore, ಏಪ್ರಿಲ್ 1 -- 'UI' ಚಿತ್ರದ ನಂತರ ಉಪೇಂದ್ರ ಯಾವೊಂದು ಹೊಸ ಚಿತ್ರವೊಂದನ್ನೂ ಒಪ್ಪಿಕೊಂಡಿರಲಿಲ್ಲ. ಕೆಲವು ತಿಂಗಳುಗಳ ಕಾಲ ಯಾವುದೇ ಹೊಸ ಚಿತ್ರ ಮಾಡುವುದಿಲ್ಲ ಎಂದು ಆ ಚಿತ್ರದ ಸಂತೋಷದ ಕೂಟದ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಇದೀಗ 'UI' ಬಿಡುಗಡೆಯಾಗಿ ಮೂರು ತಿಂಗಳುಗಳಾಗಿವೆ. ಚಿತ್ರ ಟಿವಿ ಮತ್ತು ಓಟಿಟಿಯಲ್ಲಿ ಪ್ರದರ್ಶನ ಸಹ ಬಿಡುಗಡೆಯಾಗಿದೆ. ಹೀಗಿರುವಾಗಲೇ, ಉಪೇಂದ್ರ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ.

ಉಪೇಂದ್ರ ಮತ್ತು ನಾಗಣ್ಣ ಅವರದ್ದು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟ-ನಿರ್ದೇಶಕ ಜೋಡಿ. ಈ ಜೋಡಿ ಮೊದಲ ಬಾರಿಗೆ ಒಟ್ಟಾಗಿದ್ದು 2003ರಲ್ಲಿ ಬಿಡುಗಡೆಯಾದ 'ಕುಟುಂಬ' ಚಿತ್ರಕ್ಕಾಗಿ. ಚಿರಂಜೀವಿ ಅಭಿನಯದ ಜನಪ್ರಿಯ ತೆಲುಗು ಚಿತ್ರ 'ಗ್ಯಾಂಗ್ ಲೀಡರ್‌'ನ ರೀಮೇಕ್‍ ಆಗಿದ್ದ ಈ ಚಿತ್ರವು ದೊಡ್ಡ ಯಶಸ್ಸು ಕಂಡು ಹಲವು ಚಿತ್ರಮಂದಿರಗಳಲ್ಲಿ 100 ದಿನಗಳ ಪ್ರದರ್ಶನ ಕಂಡಿತ್ತು. ಶೈಲೇಂದ್ರ ಬಾಬು ನಿರ್ಮಾಣದ ಈ ಚಿತ್ರಕ್ಕೆ ಗುರುಕಿರಣ್‍ ಸಂಯೋಜಿಸಿದ ಹಾಡುಗಳು ಸಾಕಷ್ಟು ಜನಪ್ರಿಯವಾಯಿತು.

ಈ...