ಭಾರತ, ಫೆಬ್ರವರಿ 28 -- ಮಾರ್ಚ್‌ನಲ್ಲಿ ಹೊಸ ಹೊಸ ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಅದರಲ್ಲೂ ತೆಲುಗಿನ ಈ ಐದು ಸಿನಿಮಾಗಳೂ ಮಾರ್ಚ್‌ನಲ್ಲಿ ನಿಮ್ಮನ್ನು ರಂಜಿಸಲಿವೆ. ಆ ಐದು ಸಿನಿಮಾಗಳು ಯಾವುವು ಎಂಬ ಬಗೆಗಿನ ಮಾಹಿತಿ ಇಲ್ಲಿದೆ.

ತಾಂಡೇಲ್‌: ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ ತಾಂಡೇಲ್ ಹಿಟ್‌ ಲಿಸ್ಟ್‌ಗೆ ಸೇರಿದೆ. ಬಾಕ್ಸ್‌ ಆಫೀಸ್‌ನಲ್ಲಿ 100 ಕೋಟಿ ಗಳಿಕೆ ಕಂಡ ಈ ಸಿನಿಮಾವನ್ನು ಚಂದು ಮೊಂಡೆಟಿ ನಿರ್ದೇಶನ ಮಾಡಿದ್ದಾರೆ. ಫೆಬ್ರವರಿ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಮಾರ್ಚ್‌ನಲ್ಲಿ ನೆಟ್‌ಫ್ಲಿಕ್ಸ್‌ ಒಟಿಟಿಗೆ ಬರುವ ಸಾಧ್ಯತೆ ಇದೆ.

ಲೈಲಾ: ತೆಲುಗು ನಟ ವಿಶ್ವಕ್ ಸೇನ್ ಅಭಿನಯದ ಲೈಲಾ ಪ್ರೇಕ್ಷಕರಿಂದ ನೆಗೆಟಿವ್‌ ವಿಮರ್ಶೆ ಪಡೆದು, ಹೀನಾಯ ಸೋಲನುಭವಿಸಿತು. ರಾಮ್ ನಾರಾಯಣ್ ನಿರ್ದೇಶನದ ಈ ಚಿತ್ರ ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಲೈಲಾ ಚಿತ್ರವು ಮಾರ್ಚ್ ಎರಡನೇ ವಾರ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆ...