ಭಾರತ, ಏಪ್ರಿಲ್ 15 -- Unmarried actresses over 40: ಕನ್ನಡ ಚಿತ್ರರಂಗದ ಹಲವು ನಟಿಯರು ಇನ್ನೂ ವಿವಾಹ ಬಂಧನಕ್ಕೆ ಒಳಗಾಗಿಲ್ಲ. ಕೆಲವರಿಗೆ ಮದುವೆಯಾಗಲು ಮನಸ್ಸಿಲ್ಲ. ಇನ್ನು ಕೆಲವರ ಬದುಕಿನಲ್ಲಿ ಮದುವೆ ವಿಚಾರದಲ್ಲಿ ಕಹಿ ಘಟನೆಗಳು ನಡೆದಿರಬಹುದು. ಇನ್ನು ಕೆಲವರು ಸಿನಿಮಾವೇ ನಮ್ಮ ಗಂಡ ಎಂದುಕೊಂಡಿರಬಹುದು. ಇಷ್ಟಕ್ಕೂ ಮದುವೆಯ ಅಗತ್ಯವೇನಿದೆ ಎಂದು ಭಾವಿಸುವವರೂ ಇರಬಹುದು. ಕನ್ನಡದ ಹಲವು ನಟಿಯರು ಇನ್ನೂ ಮದುವೆಯಾಗಿಲ್ಲ. 40 ವರ್ಷ ವಯಸ್ಸು ದಾಟಿದರೂ ಮದುವೆಯಾಗದ ಕೆಲವು ನಟಿಯರ ವಿವರ ಪಡೆಯೋಣ ಬನ್ನಿ.

ಕನ್ನಡ ಧಾರಾವಾಹಿ "ಕನ್ನಡತಿ"ಯಲ್ಲಿ ನಟಿಸಿರುವ, ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಲ್ಲಿ ನಸ್ರುದ್ಧೀನ್‌ ಸಹಪಾಠಿಯಾಗಿದ್ದ ಆರ್‌.ಟಿ. ರಮಾ ಮದುವೆಯಾಗಿಲ್ಲ. ಇವರು ಗೆಜ್ಜೆ ಪೂಜೆ, ಶರಪಂಜರ, ಗೌರಿ, ಜೇಡರ ಬಲೆ, ನನ್ನ ಕರ್ತವ್ಯ, ಮಹಾಸತಿ ಅನುಸೂಯ, ಮಿಸ್‌ ಲೀಲಾವತಿ, ನಾ ಮೆಚ್ಚಿದ ಹುಡುಗ, ಸತಿ ಸುಕನ್ಯಾ, ಮನ ಮೆಚ್ಚಿದ ಮಡದಿ, ಬಾಲು ಬೆಳಗಿತು, ಪುನರ್ಜನ್ಮ, ಕಪ್ಪು ಬಿಳುಪು, ಅನುಗ್ರಹ, ಮುಗಿಯದ ಕಥೆ, ಭಲೇ ಅದೃಷ್ಟವೋ ಅದ...