ಭಾರತ, ಜನವರಿ 30 -- Union Budget 2025: ಕಳೆದ ಕೆಲವು ವರ್ಷಗಳಿಂದ ತೆರಿಗೆ ಹೊರೆಯನ್ನು ಹೊತ್ತಿರುವುದು ಮಧ್ಯಮ ವರ್ಗ. ಇದನ್ನು ನಿರ್ಲಕ್ಷಿಸುವಂತೆ ಇಲ್ಲ. ಇದೊಂದು ರೀತಿ ಟ್ಯಾಕ್ಸ್ ಟೆರರಿಸಂ ಎಂಬುದು ಬಹುಸಂಖ್ಯಾತ ಮಧ್ಯಮ ವರ್ಗದ ಜನರ ಭಾವನೆ. ಈ ಭಾವನೆಯಿಂದ ಅವರನ್ನು ಹೊರತರಬೇಕಾದ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ. ಟ್ಯಾಕ್ಸ್ ಟೆರರಿಸಂ ಬಿಡಿ, ಮಧ್ಯಮ ವರ್ಗಕ್ಕೆ ಆದಾಯ ತೆರಿಗೆ ರಿಲೀಫ್ ಕೊಡಿ ಎಂದು ಇನ್ಫೋಸಿಸ್ ಸಂಸ್ಥೆ ಮಾಜಿ ಸಿಎಫ್‌ಒ ಟಿವಿ ಮೋಹನ್‌ದಾಸ್‌ ಪೈ ನೇರವಾಗಿ ಹೇಳಿದ್ದಾರೆ. ಹೆಚ್ಚುತ್ತಿರುವ ಹಣದುಬ್ಬರ, ಹೆಚ್ಚುತ್ತಿರುವ ಇಎಂಐ ಕಂತುಗಳು, ಶಿಕ್ಷಣ ವೆಚ್ಚ ಹೆಚ್ಚಳ ಹೀಗೆ ಎಲ್ಲವೂ ಮಧ್ಯಮ ವರ್ಗ ಹೊರುತ್ತಿರುವ ಹೊರೆಯನ್ನು ಎತ್ತಿತೋರಿಸಿದೆ. ಭಾರತದ ಅರ್ಥ ವ್ಯವಸ್ಥೆ ಮತ್ತು ಹಣಕಾಸಿನ ಒಳನೋಟ ಹೊಂದಿರುವ ಟಿವಿ ಮೋಹನ್ ದಾಸ್ ಪೈ ಅವರು ಹಿಂದೂಸ್ತಾನ್‌ ಟೈಮ್ಸ್ ಕನ್ನಡದ ಸೋದರ ಸಂಸ್ಥೆ ಮಿಂಟ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮಧ್ಯಮ ವರ್ಗದ ಕುಟುಂಬಗಳ ಮೇಲಿನ ಹೊರೆಯ ಬಗ್...