ಭಾರತ, ಜನವರಿ 31 -- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-26ರ ಸಾಲಿನ ಬಜೆಟ್ ಮಂಡಿಸಲು ರೆಡಿಯಾಗಿದ್ದಾರೆ. ಫೆಬ್ರುವರಿ 1 ಅಂದರೆ ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಪ್ರತಿಬಾರಿಯಂತೆ ಈ ಬಾರಿಯೂ ಬಜೆಟ್‌ನಿಂದ ಆರೋಗ್ಯ ಕ್ಷೇತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಆಯುಷ್ಮಾನ್ ಭಾರತ, ಆರೋಗ್ಯ ವಿಮೆ ವ್ಯಾಪ್ತಿ ಹೆಚ್ಚಳ, ಆರೋಗ್ಯ ಸಲಕರಣೆ ಹಾಗೂ ಉಪಭೋಗ್ಯ ವಸ್ತುಗಳ ಮೇಲಿನ ತೆರಿಗೆ ವಿನಾಯಿತಿ, ಪ್ರಿವೆಂಟಿವ್ ಹೆಲ್ತ್‌ಕೇರ್‌ಗೆ ಒತ್ತು ನೀಡುವುದು ಈ ಕೆಲವು ಯೋಜನೆಗಳ ವಿಸ್ತರಣೆಯನ್ನು ಬಜೆಟ್‌ನಿಂದ ನಿರೀಕ್ಷಿಸಲಾಗುತ್ತಿದೆ.

ಈ ವರ್ಷದ ಬಜೆಟ್‌ನಲ್ಲಿ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಜೊತೆಗೆ ಅವರ ಜೇಬಿನಿಂದ ಹಣ ಕಡಿಮೆ ಖರ್ಚಾಗುವಂತೆ ಮಾಡಲು ವಿಮಾ ಸೌಲಭ್ಯ ಎಲ್ಲರಿಗೂ ಲಭ್ಯವಾಗುವಂತೆ ವ್ಯಾಪ್ತಿಯನ್ನು ಹೆಚ್ಚಿಸಬೇಕು, ರೋಗ ತಡೆಗಟ್ಟುವಿಕೆ ಮತ್ತು ಗುಣಪಡಿಸುವ ಆರೈಕೆಗಾಗಿ ದೃಢವಾದ ವ್ಯವಸ್ಥೆಯನ್ನು ರಚಿಸಬೇಕು ಎಂದು ವಿಟಸ್‌ಕೇರ್‌ನ ಪ್ರವರ್ತಕ, ಸಂಸ್ಥಾಪಕ ಮತ್ತು ಸಿಎಫ್‌ಒ ಪಂಕಜ್ ಟಂಡನ್ ಲೈವ್...