Bangalore, ಫೆಬ್ರವರಿ 1 -- Union Budget 2025: ಭಾರತದ ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಒಂದಾದ ಭಾರತೀಯ ಅಂಚೆ (India Post)ಗೆ ಕಾಯಕಲ್ಪ ಕೊಡುವಂತಹ ಮಹತ್ವದ ಘೋಷಣೆಯನ್ನು ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದಾರೆ. ತನ್ನ ಬಜೆಟ್‌ ಭಾಷಣದಲ್ಲಿ ಇಂಡಿಯಾ ಪೋಸ್ಟ್‌ ಕುರಿತಾದ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಇಂಡಿಯಾ ಪೋಸ್ಟ್‌ (ಭಾರತೀಯ ಅಂಚೆ ಇಲಾಖೆ) ಅನ್ನು ಬೃಹತ್ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲಾಗುವುದು ಎಂದು ಅವರು ಘೋಷಿಸಿದ್ದಾರೆ. ಈಗಿನ ಮೊಬೈಲ್‌, ಎಸ್‌ಎಂಎಸ್‌, ಇಂಟರ್‌ನೆಟ್‌, ಸೋಷಿಯಲ್‌ ಮೀಡಿಯಾ ಯುಗದಲ್ಲಿ ಪತ್ರ ಬರೆಯುವವರು ಕಡಿಮೆಯಾಗುತ್ತಿದ್ದಾರೆ. ಇದರಿಂದ ಇಂಡಿಯಾ ಪೋಸ್ಟ್‌ನ ಕೆಲಸಗಳು ಕಡಿಮೆಯಾಗುತ್ತಿವೆ. ಇದೇ ಸಮಯದಲ್ಲಿ ಇಂಡಿಯಾ ಪೋಸ್ಟ್‌ ಅನ್ನು ಬೃಹತ್‌ ಲಾಜಿಸ್ಟಿಕ್ಸ್‌ ಸಂಸ್ಥೆಯಾಗಿಸುವ ಸೂಚನೆಯನ್ನು ಬಜೆಟ್‌ನಲ್ಲಿ ನೀಡಿರುವುದು ಆಶಾದಾಯಕವಾಗಿದೆ.

1.5 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳು, ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್...