Delhi, ಫೆಬ್ರವರಿ 1 -- ದೆಹಲಿ: ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಬಜೆಟ್‌ ನಲ್ಲಿ ಬಿಹಾರ ರಾಜ್ಯಕ್ಕೆ ಹೆಚ್ಚಿನ ಮಹತ್ವ ದೊರೆತಿದೆ. ಎನ್‌ಡಿಎ ಪ್ರಮುಖ ಪಾಲುದಾರ ಪಕ್ಷವಾಗಿರುವ ಸಂಯುಕ್ತ ಜನತಾದಳ ಬಿಹಾರದ ಪ್ರಗತಿ ನಿಟ್ಟಿನಲ್ಲಿ ಹಲವು ಬೇಡಿಕೆಗಳನ್ನು ಮಂಡಿಸಿದ್ದು,ಅದರಂತೆಯೇ ಬಜೆಟ್‌ನಲ್ಲಿ ಆದ್ಯತೆಯನ್ನು ನೀಡಿದಂತೆ ಕಾಣುತ್ತಿದೆ. ಬಿಹಾರ ರಾಜ್ಯ ಮೂಲದ ಮಧುಬನಿ ಕಲೆಯ ಹಿನ್ನೆಲೆ ಹೊಂದಿರುವ ವಿಶೇಷ ಸೀರೆಯನ್ನು ಉಟ್ಟು ಬಜೆಟ್‌ ಮಂಡನೆಗೆ ಅಗಮಿಸಿದ ನಿರ್ಮಲಾ ಅವರ ಪ್ರತಿ ವಿಷಯಗಳ ಮಂಡನೆಯಲ್ಲಿ ಬಿಹಾರದ ಹೆಸರು ಉಲ್ಲೇಖವಾಗುತ್ತಿರುವುದು ಕಂಡು ಬಂದಿತು.

ಬಿಹಾರಕ್ಕೆ ಹಲವು ಕೊಡುಗೆಗನ್ನು ನೀಡಲಾಗಿದೆ. ಅದರಲ್ಲಿ ನಾವು ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸುತ್ತೇವೆ, ಇದು ಪೂರ್ವ ಭಾರತದಲ್ಲಿ ಆಹಾರ ಸಂಸ್ಕರಣೆಯನ್ನು ಹೆಚ್ಚಿಸುತ್ತದೆ. ಇದು ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಎನ್ನುವುದು ಸಚಿವ...