Delhi, ಫೆಬ್ರವರಿ 1 -- Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಆಯವ್ಯಯದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಶಿಕ್ಷಣ, ಆರೋಗ್ಯ, ನಗರಾಭಿವೃದ್ದಿ, ವಿದ್ಯುತ್‌ ವಲಯ, ನೀರು ಸರಬರಾಜು, ಗಿಗಾ ಕಾರ್ಮಿಕರ ಹಿತ ರಕ್ಷಣೆ ಸಹಿತ ಹಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ, ನಿರ್ಮಲಾ ಅವರ ಬಜೆಟ್‌ ನ ಪ್ರಮುಖ ಹತ್ತು ಅಂಶಗಳು ಇಲ್ಲಿವೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳು 'ಗ್ರಾಮೀನ್ ಕ್ರೆಡಿಟ್ ಸ್ಕೋರ್' ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತವೆ. ಸ್ವಸಹಾಯ ಸಂಘಗಳ ಆರ್ಥಿಕ ಬೆಳವಣಿಗೆಗೆ ಇದು ಪೂರಕವಾಗಲಿದೆ. ಸ್ವಯ ಸಹಾಯ ಗುಂಪುಗಳ ಸದಸ್ಯರು ಮತ್ತು ಗ್ರಾಮೀಣ ಪ್ರದೇಶದ ಜನರ ಸಾಲದ ಅಗತ್ಯಗಳನ್ನು ಪೂರೈಸಲು ಕ್ರೆಡಿಟ್‌ ಸ್ಕೋರ್‌ ನೆರವಾಗಲಿದೆ.

2. ಕೆವೈಸಿ ಸರಳೀಕರಣ

ಈಗ ಆಧಾರ್‌ ಸಹಿತ ಅಗತ್ಯ ದಾಖಲೆಗಳನ್ನು ಒದಗಿಸಲು ಆಗಾಗ ಕೆವೈಸಿ ಮಾಡಿಸುವ ಪದ್ದತಿ ಜಾರಿಯಲ್ಲಿದೆ. ಇದನ್ನು ಸರಳೀಕರಣಗೊಳಿಸುವ ಪ್ರಸ್ತಾವವನ್ನು ಮಾಡಲಾಗಿದೆ. ಈಗಾಗಲೇ ಕೆವೈಸಿ ಸರಳೀಕರಣಗೊಳಿಸುವ ಪ್ರಕಟಣೆಯಾಗ...