ಭಾರತ, ಜನವರಿ 31 -- Union Budget session 2025: ಕೇಂದ್ರ ಬಜೆಟ್ ಅಧಿವೇಶನ ಇಂದು (ಜನವರಿ 31) ಶುರುವಾಗುತ್ತಿದೆ. ಪೂರ್ವಾಹ್ನ 11 ಗಂಟೆಗೆ ಸಂಸತ್ತಿನ ಉಭಯ ಸದನಗಳ (ರಾಜ್ಯಸಭೆ ಮತ್ತು ಲೋಕಸಭೆ) ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ಈ ಭಾಷಣದೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ಶುರುವಾಗಲಿದೆ. ಇದಾದ ಬಳಿಕ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ನಾಳೆ (ಫೆ 1) ಕೇಂದ್ರ ಬಜೆಟ್ 2025-26 (Union Budget 2025-26) ಮಂಡನೆಯಾಗಲಿದೆ.

ಕೇಂದ್ರ ಬಜೆಟ್ ಅಧಿವೇಶನ ಇಂದು ಶುರುವಾಗುತ್ತಿದ್ದು, ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನದ ಬೆನ್ನಿಗೆ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜನವರಿ 31) ಲೋಕಸಭೆಯಲ್ಲಿ ಮಧ್ಯಾಹ್ನ 12 ಗಂಟೆಗೆ, ರಾಜ್ಯಸಭೆಯಲ್ಲಿ ಅಪರಾಹ್ನ 2 ಗಂಟೆಗೆ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.

ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗ...