Bangalore, ಫೆಬ್ರವರಿ 1 -- Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಕೇಂದ್ರ ಸರ್ಕಾರದ ಆಯವ್ಯಯದ ಕುರಿತು ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆದಾಯ ತೆರಿಗೆ ವಿನಾಯಿತಿ ಪ್ರಮಾಣವನ್ನು ಏರಿಸುವುದು ಸ್ವಾಗತಾರ್ಹವಾದರೂ ಶಿಕ್ಷಣ, ಮಹಿಳೆಯರ ಸಹಿತ ಹಲವಾರು ವಲಯಗಳಿಗೆ ನಿರ್ದಿಷ್ಟ ಕಾರ್ಯಕ್ರಮಗಳೇ ಕಾಣುತ್ತಿಲ್ಲ. ಸ್ಟಾರ್ಟ್‌ ಅಪ್‌ ಕಂಪೆನಿಗಳಿಗೆ ಸಾಲ ನೀಡುವ ಪ್ರಮಾಣ ಏರಿಕೆಯಾಗಿದೆ. ಆದರೆ ಕಿಸಾನ್‌ ಕಾರ್ಡ್‌ ಹೊಂದಿದವರಿಗೆ ಸಾಲದ ಪ್ರಮಾಣ ಏರಿಸಿದ್ದರೂ ರೈತರು ಬೆಳೆಯುವ ಉತ್ಪಾದನೆಗೆ ನಿರ್ದಿಷ್ಟ ಯೋಜನೆಗಳು ಕಾಣುತ್ತಿಲ್ಲ ಎನ್ನುವ ಅಭಿಪ್ರಾಯವನ್ನು ವಿಭಿನ್ನ ಕ್ಷೇತ್ರದ ತಜ್ಞರು ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯಗಳ ನೋಟ ಇಲ್ಲಿದೆ.

12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯತಿಯನ್ನು ಘೋಷಣೆ ಮಾಡಿದ್ದು ಸ್ವಾಗತ ಸ್ಟಾರ್ಟ್ ಅಪ್ ಕಂಪನಿಗಳಿಗೆ 10 ರಿಂದ 20 ಕೋಟಿ ವರೆಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುವುದು ಸಿಗುವಂತೆ ಘೋಷಿಸಲಾಗಿದೆ ಇದರಂದೇ ಸಣ್ಣ ಉದ್ಯಮಿಗಳಿಗೆ ಪ್ರೋತ್ಸಾಹ ಕ...