ಭಾರತ, ಜನವರಿ 30 -- Iconic Indian Budgets: ಸದ್ಯ ಎಲ್ಲರ ಗಮನವೂ ಕೇಂದ್ರ ಬಜೆಟ್ ಕಡೆಗಿದೆ. ಕೇಂದ್ರ ಸರ್ಕಾರ ಮುಂದಿನ ಹಣಕಾಸು ವರ್ಷಕ್ಕೆ (2025-26) ಸಂಬಂಧಿಸಿದ ಕೇಂದ್ರ ಬಜೆಟ್ 2025-26 ಅನ್ನು ಫೆಬ್ರವರಿ 1 ರಂದು ಮಂಡಿಸಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ ಎಂಟನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಜನವರಿ 31 ರಂದು ಸಂಸತ್‌ನ ಜಂಟಿ ಅಧಿವೇಶನ ಶುರುವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನಕ್ಕೆ ಚಾಲನೆ ನೀಡಿದ ಬಳಿಕ, ದೇಶದ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಮಾರನೇ ದಿನ ಬಜೆಟ್ ಮಂಡನೆಯಾಗಲಿದೆ. ಜನರ ನಿರೀಕ್ಷೆಗಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ, ಕೇಂದ್ರ ಬಜೆಟ್‌ ಎಂಬುದು ದೇಶದ ಅರ್ಥ ವ್ಯವಸ್ಥೆಯನ್ನು ರೂಪಿಸುವ ಹಣಕಾಸು ಹೇಳಿಕೆಯೂ ಹೌದು ಎಂಬುದನ್ನು ಮರೆಯುವಂತಿಲ್ಲ. ಕೇಂದ್ರ ಬಜೆಟ್ ಮಂಡನೆಯ ಈ ಹೊತ್ತು ನಿಮಿತ್ತವಾಗಿದ್ದು, ಭಾರತದ ಅರ್ಥವ್ಯವಸ್ಥೆಗೆ ದಿಶೆ ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳ ಕಡೆಗೆ ಸಿಂಹಾವಲೋಕನ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ....