ಭಾರತ, ಜನವರಿ 26 -- Union Budget 2025: ಕೇಂದ್ರ ಬಜೆಟ್ 2025ರ ಹಲ್ವಾ ಕಾರ್ಯಕ್ರಮ ಮುಗಿಸಿಕೊಂಡು ಹಣಕಾಸು ಸಚಿವಾಲಯದ ನಿಯೋಜಿತ ಅಧಿಕಾರಿಗಳು ಬಜೆಟ್ ಪ್ರತಿ ಸಿದ್ಧತೆಗಾಗಿ ಈಗಾಗಲೇ ಕೆಲಸ ಶುರುವಮಾಡಿದ್ದಾರೆ. ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಜನವರಿ 31 ರಂದು ಸಂಸತ್‌ನ ಬಜೆಟ್ ಅಧಿವೇಶನ ಶುರುವಾಗಲಿದ್ದು, ಫೆ 1 ರಂದು ಕೇಂದ್ರ ಬಜೆಟ್ 2025-26 ಮಂಡನೆಯಾಗಲಿದೆ. ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದು. ಕಳೆದ ವರ್ಷ ಮೂರನೇ ಅವಧಿಗೆ ಮೈತ್ರಿ ಸರ್ಕಾರ ರಚಿಸಿಕೊಂಡಿರುವ ಬಿಜೆಪಿ, 2024ರ ಜುಲೈನಲ್ಲಿ ಈ ವರ್ಷದ ಪೂರಕ ಬಜೆಟ್ ಮಂಡಿಸಿತ್ತು.

ಕೇಂದ್ರ ಬಜೆಟ್ ತಯಾರಿ ಸುಲಭದ ಕೆಲಸವಲ್ಲ. ಸಂಸತ್‌ನಲ್ಲಿ ಕೇಂದ್ರ ಬಜೆಟ್ ಮಂಡನೆಯಾಗುವ ಆರು ತಿಂಗಳು ಮೊದಲೇ, ಸಾಮಾನ್ಯವಾಗಿ ಸೆಪ್ಟೆಂಬರ್‌ ತಿಂಗಳಲ್ಲಿ ಕೇಂದ್ರ ಬಜೆಟ್‌ನ ತಯಾರಿಯ ಪ್ರಕ್ರಿಯೆಯು ಶುರುವಾಗುತ್ತದೆ.

1) ಹಣಕಾಸು ಸಚಿವಾಲಯದ ಸುತ್ತೋಲೆ: ಮೊದಲನೇಯದಾಗಿ, ಹಣಕಾಸು ಸಚಿವಾಲಯವು ಎಲ್ಲ ಸಚಿವಾಲಯಗಳು, ಇಲಾಖೆಗಳಿಗೆ ...