ಭಾರತ, ಮಾರ್ಚ್ 15 -- Unhealthy Fashion Trend: ಫ್ಯಾಷನ್ ಜಗತ್ತು ಸದಾ ಹರಿಯುವ ನೀರಿದ್ದಂತೆ. ಕೆಲವು ವರ್ಷಗಳ ಹಿಂದಿನ ಫ್ಯಾಷನ್ ಇಂದು ಸಂಪೂರ್ಣ ಹಳೆಯದಾಗಿರುತ್ತದೆ. ಇನ್ನಷ್ಟು ವರ್ಷಗಳ ಹಿಂದಿನ ಫ್ಯಾಷನ್ ಹೊರ ರೂಪದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿರುತ್ತದೆ. ಆದಾಗ್ಯೂ, ನಾವು ಧರಿಸುವ ಬಟ್ಟೆಗಳು ನಮ್ಮ ವ್ಯಕ್ತಿತ್ವವನ್ನು ಹೆಚ್ಚು ಆಕರ್ಷಕ ಮತ್ತು ಸುಂದರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ ಈಗಿನ ಫ್ಯಾಷನ್‌ ಟ್ರೆಂಡ್‌ಗೆ ತಕ್ಕಂತೆ ಬದಲಾಗುವುದು ಹಾಗೂ ನಾವು ಅದನ್ನು ಅನುಸರಿಸುವುದು ಕೂಡ ಮುಖ್ಯವಾಗುತ್ತದೆ.

ಆದರೂ ಯಾವುದೇ ಪ್ರವೃತ್ತಿಯನ್ನು ಕುರುಡಾಗಿ ಅನುಸರಿಸುವುದು ಸಹ ದೊಡ್ಡ ತಪ್ಪಾಗುತ್ತದೆ. ನೀವು ಯಾವುದೇ ಫ್ಯಾಷನ್ ಟ್ರೆಂಡ್ ಆರಿಸಿಕೊಂಡರೂ, ಬೇರೆಯವರು ಅದನ್ನು ಧರಿಸುತ್ತಾರೆ ಮತ್ತು ಅದು ನಿಮಗೆ ಇಷ್ಟವಾಯ್ತು ಎನ್ನುವ ಕಾರಣಕ್ಕೆ ಅದನ್ನು ಅತಿಯಾಗಿ ಅನುಸರಿಸುವುದರಿಂದ ನಿಮ್ಮನ್ನು ನೀವು ಅಪಾಯಕ್ಕೆ ಸಿಲುಕಿಸುತ್ತಿದ್ದೀರಿ ಎಂದರ್ಥ. ಯಾಕೆಂದರೆ ಕೆಲವೊಮ್ಮೆ, ಕೆಲವು ಬಟ್ಟೆಗಳು ಟ್ರೆಂಡಿಯಾಗಿ ಕಂಡ...