Hyderabad, ಜನವರಿ 29 -- UI World Television Premier: ರಿಯಲ್‌ ಸ್ಟಾರ್‌ ಉಪೇಂದ್ರ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶಕರಾಗಿಯೂ ಕಂಬ್ಯಾಕ್‌ ಮಾಡಿದ ಸಿನಿಮಾ ಯುಐ. ಡಿಸೆಂಬರ್‌ 20ರಂದು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಬೆಂಗಾಲಿ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಅದ್ಧೂರಿಯಾಗಿ ತೆರೆಗೆ ಬಂದಿತ್ತು. ಪ್ರೇಕ್ಷಕರಿಂದಲೂ ಮೆಚ್ಚುಗೆ ಪಡೆದಿದ್ದ ಈ ಚಿತ್ರ, ವಿಮರ್ಶೆ ದೃಷ್ಟಿಯಿಂದ ಪ್ರೇಕ್ಷಕರ ತೆಲೆಗೆ ಹುಳ ಬಿಟ್ಟಿತ್ತು. ಆದರೆ, ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡು ತಿಂಗಳ ಮೇಲಾದರೂ, ಇನ್ನೂ ಒಟಿಟಿಯ ಸುದ್ದಿಯಿಲ್ಲ. ಈ ನಡುವೆ ಒಟಿಟಿಗೂ ಮುನ್ನವೇ ಕಿರುತೆರೆಗೆ ಆಗಮಿಸಲು ಸಜ್ಜಾಗಿದೆ ಈ ಸಿನಿಮಾ.

ಡಿಸೆಂಬರ್‌ 20ರಂದು ಬಿಡುಗಡೆ ಆಗಿದ್ದ ಯುಐ ಸಿನಿಮಾ, ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿಯನ್ನೇ ಮಾಡಿದೆ. ಅಂದಾಜು 35ರಿಂದ 40 ಪ್ಲಸ್‌ ಕೋಟಿ ಗಳಿಕೆ ಮಾಡಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಚಿತ್ರತಂಡ ಮಾತ್ರ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇದೇ ...