ಭಾರತ, ಮಾರ್ಚ್ 14 -- ಯುಗಾದಿ ಒಂದು ಯುಗದ ಅಂತ್ಯವಾಗಿ ಹೊಸ ಯುಗ ಆರಂಭವಾಗುವುದನ್ನು ಸೂಚಿಸುತ್ತದೆ. ಯುಗಾದಿ ಹಬ್ಬದಲ್ಲಿ ಬೇವು-ಬೆಲ್ಲ ತಿನ್ನುವ ಜೊತೆಗೆ ಮನೆ ಅಲಂಕಾರಕ್ಕೂ ವಿಶೇಷ ಮಹತ್ವ ನೀಡಲಾಗುತ್ತದೆ. ಯುಗಾದಿ ಹಬ್ಬದ ಸಂದರ್ಭ ಮನೆ ಮುಂದೆ ವಿಶೇಷವಾದ, ಸುಂದರ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಈ ವರ್ಷ ಮಾರ್ಚ್ 30ಕ್ಕೆ ಯುಗಾದಿ ಹಬ್ಬವಿದ್ದು, ಈ ಯುಗಾದಿಗೆ ವಿಶೇಷವಾದ ಸುಂದರ ಬಿಡಿಸಬೇಕು ಅಂತಿದ್ದರೆ ಈ ಡಿಸೈನ್‌ಗಳನ್ನು ಗಮನಿಸಿ. ಇವು ಖಂಡಿತ ನಿಮಗೆ ಇಷ್ಟವಾಗುತ್ತದೆ. ಮಾತ್ರವಲ್ಲ ರಂಗೋಲಿ ಹಾಕಲು ಬಾರದವರು ಈಗಿನಿಂದಲೇ ಅಭ್ಯಾಸ ಮಾಡಿ.

ಯುಗಾದಿ ಹಬ್ಬಕ್ಕೆ ಸಿಂಪಲ್ ಆಗಿ ವಿಶ್ ಬರೆಯುವ ರೀತಿಯ ರಂಗೋಲಿ ಬಿಡಿಸಬೇಕು ಅಂತಿದ್ದರೆ ಈ ಡಿಸೈನ್ ಹೇಳಿ ಮಾಡಿಸಿದ್ದು. ಕಳಶದ ಮೇಲೆ ಸ್ವಸ್ತಿಕ್ ಚಿಹ್ನೆ ಬರೆದು ಯುಗಾದಿ ಶುಭಾಶಯವನ್ನೂ ಬರೆದಿರುವ ಈ ರಂಗೋಲಿಯನ್ನು ದೇವರ ಕೋಣೆ ಅಥವಾ ಟೇಬಲ್ ಮೇಲೆ ಕೂಡ ಬಿಡಿಸಬಹುದು.

ಯುಗಾದಿ ಎಂದರೆ ಬೇವು-ಬೆಲ್ಲ, ಮಾವಿನ ತೋರಣ ಇವೆಲ್ಲವೂ ಇರಲೇಬೇಕು. ಈ ಎಲ್ಲವನ್ನೂ ರಂಗೋಲಿಯಲ್ಲೂ ಮೂಡಿಸಿದರೆ ಎಷ್ಟು...