ಭಾರತ, ಮಾರ್ಚ್ 24 -- ಯಾದಗಿರಿ: ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇಗುಲವೂ ಒಂದು. ಆಂಧ್ರಪ್ರದೇಶದಲ್ಲಿರುವ ಈ ದೇಗುಲಕ್ಕೆ ಕರ್ನಾಟಕದಿಂದಲೂ ಸಾಕಷ್ಟು ಮಂದಿ ಭೇಟಿ ನೀಡುತ್ತಾರೆ. ಯುಗಾದಿ ಸಮಯದಲ್ಲಿ ಈ ದೇಗುಲದಲ್ಲಿ ವಿಶೇಷ ವಾರ್ಷಿಕ ಜಾತ್ರೆ ನಡೆಯುತ್ತದೆ. ಇಲ್ಲಿದೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಂದ ಜನರು ತೆರಳುತ್ತಾರೆ. ನೀವು ಯಾದಗಿರಿಯಲ್ಲಿ ವಾಸಿಸುತ್ತಿದ್ದರೆ ನಿಮಗೊಂದು ಗುಡ್‌ನ್ಯೂಸ್ ಇದೆ. ನೀವು ಈ ಬಾರಿ ಯುಗಾದಿಗೆ ಮಲ್ಲಿಕಾರ್ಜುನ ಜಾತ್ರೆಗೆ ತೆರಳಬೇಕು ಅಂತಿದ್ದರೆ ಕೆಕೆಆರ್‌ಟಿಸಿ ನಿಮಗಾಗಿ ವಿಶೇಷ ಸೌಲಭ್ಯ ನೀಡಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ಯಾದಗಿರಿ ವಿಭಾಗವು ಜಿಲ್ಲೆಯ ವಿವಿಧ ಭಾಗಗಳಿಂದ ಶ್ರೀಶೈಲಕ್ಕೆ ವಿಶೇಷ ಬಸ್‌ಗಳನ್ನು ಓಡಿಸಲಿದೆ ಎಂದು ವಿಭಾಗೀಯ ನಿಯಂತ್ರಕ ಸುನಿಲ್ ಕುಮಾರ್ ಚಂದರಗಿ ತಿಳಿಸಿದ್ದಾರೆ.

'ಯುಗಾದಿ ಪ್ರಯಕ್ತ ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಜಾತ್ರೆ ಇರುತ್ತದೆ. ಆ ಕಾರಣಕ್ಕೆ ಅಲ್ಲಿಗೆ ಹೋಗುವವರಿಗೆ...