ಭಾರತ, ಮಾರ್ಚ್ 29 -- ಯುಗಾದಿ ಹಬ್ಬದ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ಯುಗಾದಿ ಸಮಯದಲ್ಲಿ ನಿಮ್ಮ ಮನೆಯಲ್ಲಿ ಮಗು ಜನಿಸಿದ್ದರೆ, ಸಡಗರ ಇನ್ನಷ್ಟು ಹೆಚ್ಚಿರುತ್ತದೆ. ಹಬ್ಬದ ಸಮಯದಲ್ಲಿ ಮಗು ಜನಿಸಿದ್ದರೆ ಯುಗಾದಿಗೆ ಸಂಬಂಧಿಸಿ ಅಥವಾ ಹೊಸ ಆರಂಭ ಎನ್ನುವ ಅರ್ಥ ಬರುವಂತೆ ಕಂದಮ್ಮನಿಗೆ ಹೆಸರು ಇಡಲು ಬಯಸುತ್ತಾರೆ. ನಿಮ್ಮ ಮನೆಯಲ್ಲೂ ಯುಗಾದಿ ಸಮಯದಲ್ಲಿ ಮಗು ಜನಿಸಿದ್ದು, ಮಗುವಿಗೆ ವಿಶೇಷ ಹೆಸರು ಇಡಬೇಕು ಅಂತಿದ್ದರೆ ಗಮನಿಸಿ. ಇಲ್ಲಿ ಒಂದಿಷ್ಟು ವಿಭಿನ್ನ ಹೆಸರುಗಳು ಹಾಗೂ ಹೆಸರಿನ ಅರ್ಥ ವಿವರ ಇದೆ. ಇದರಲ್ಲಿ ಗಂಡು ಹಾಗೂ ಹೆಣ್ಣುಮಗು ಇಬ್ಬರಿಗೂ ಇರಿಸಬಹುದಾದ ಹೆಸರುಗಳಿವೆ. ಇದರಲ್ಲಿ ನಿಮಗೆ ಇಷ್ಟವಾಗಿರುವುದನ್ನು ಆರಿಸಿಕೊಳ್ಳಿ.

ಗಂಡು ಮಕ್ಕಳಿಗೆ ಇರಿಸಬಹುದಾದ ಹೆಸರುಆರವ್: ಶಾಂತಿಯಿಂದ ಕೂಡಿದ ಎಂದರ್ಥ ಅಭಯ್: ಭಯ ಇಲ್ಲದವನು ಎಂದರ್ಥ ಅಯಾನ್: ಉಡುಗೊರೆ ಎಂದರ್ಥ, ಯುಗಾದಿ ಸಮಯದಲ್ಲಿ ನಿಮ್ಮ ಬದುಕಿಗೆ ಬಂದ ಉಡುಗೊರೆ ಎಂದು ನೀವು ಪರಿಗಣಿಸಬಹುದು ಅಂಶ್: ಯಾವುದೇ ಒಂದು ಶಕ್ತಿಯ ಅಂಶ ಅಥವಾ ದೇವರ ಅಂಶ ಎಂದು ನೀವು ಈ ಹೆಸರನ್ನು ಪರಿಗಣ...