Bangalore, ಮಾರ್ಚ್ 28 -- Ugadi 2025: ಯುಗಾದಿ ಬೇವು-ಬೆಲ್ಲದ ಹಬ್ಬ. ಸಿಹಿ ಕಹಿ ಮಿಶ್ರಣವನ್ನು ಒಟ್ಟಿಗೆ ಸೇವಿಸುತ್ತಾ ಕಷ್ಟ ಸುಖಗಳೆರಡನ್ನೂ ಸಮಭಾವದಿಂದ ನೋಡುತ್ತೇವೆ ಎನ್ನುವುದರ ಸಂಕೇತ ಬೇವು ಬೆಲ್ಲ. ಯುಗಾದಿ ಮರುದಿನ ಆಚರಿಸುವ ಹೊಸತೊಡಕು ಹಬ್ಬದ ಕಳೆಯನ್ನು ಇನ್ನೂ ಹೆಚ್ಚಿಸುತ್ತದೆ. ಯುಗಾದಿಯ ಹೋಳಿಗೆಗಿಂತಲೂ ಮರುದಿನದ ಮಾಂಸಾಹಾರಕ್ಕೆ ಕಾಯುವ ಜನರೂ ಇದ್ದಾರೆ. ಯುಗಾದಿ ಎಷ್ಡು ಮುಖ್ಯವೋ ವರ್ಷತೊಡಕು ಅಷ್ಟೇ ಮುಖ್ಯವಾಗಿದೆ. ಅದರಲ್ಲೂ ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ, ರಾಮನಗರ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಹೊಸತೊಡಕು ಕಳೆಕಟ್ಟುತ್ತದೆ. ಈ ವರ್ಷ ಯುಗಾದಿಯನ್ನು ಭಾನುವಾರ ಆಚರಿಸಲಾಗುತ್ತದೆ. ಮರುದಿನ ಸೋಮವಾರ ಮಾಂಸ ತಿನ್ನುವವರ ಸಂಖ್ಯೆ ಕಡಿಮೆ. ಆದ್ದರಿಂದ ಮಂಗಳವಾರ ಹೊಸತೊಡಕು ಜೋರಾಗಿಯೇ ನಡೆಯುತ್ತದೆ.

ಹೊಸತೊಡಕು ಪದ ಹೇಗಾಗಿದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ವರ್ಷದೊಡಕು, ವರ್ಷ ತೊಡಕು, ವರ್ಷ ತುಡುಕು, ವರ್ಷ ದುಡುಕು ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತಿದೆ.

ವಿಶೇಷವಾಗಿ ಒಕ್ಕಲಿಗ ಸಮುದಾಯ ಅಥವಾ ಗೌ...