ಭಾರತ, ಮಾರ್ಚ್ 29 -- ಯುಗಾದಿ ಹಿಂದೂಗಳ ಹೊಸ ವರ್ಷ. ಭಾರತದಾದ್ಯಂತ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ಸಮಯದಲ್ಲಿ ಮನೆಯಲ್ಲಿ ಪುಟಾಣಿ ಮಕ್ಕಳಿದ್ದರೆ ಯುಗಾದಿ ಥೀಮ್‌ನಲ್ಲಿ ಫೋಟೊಶೂಟ್ ಮಾಡಿಸುವ ಟ್ರೆಂಡ್ ಇತ್ತೀಚೆಗೆ ಶುರುವಾಗಿದೆ. ನಿಮ್ಮ ಮನೆಯಲ್ಲೂ ಪುಟ್ಟ ಮಗುವಿದ್ದು, ಆ ಮಗುವಿಗೆ ಯುಗಾದಿ ಪರಿಕಲ್ಪನೆಯನ್ನು ಸುಂದರವಾಗಿ ಡ್ರೆಸ್ ಮಾಡಿಸಿ, ಫೋಟೊ ತೆಗೆಸಬೇಕು ಅಂತಿದ್ದರೆ ಈ ಐಡಿಯಾಗಳು ನಿಮಗೆ ಇಷ್ಟವಾಗಬಹುದು ನೋಡಿ. ಇಲ್ಲಿವೆ ನಿಮಗಾಗಿ ಒಂದಿಷ್ಟು ಫೋಟೊಶೂಟ್ ಐಡಿಯಾಗಳು.

ನಿಮ್ಮ ಮನೆಯ ಪುಟ್ಟ ಲಕ್ಷ್ಮೀಗೆ ಈ ರೀತಿ ಜರಿ ಲಂಗ-ರವಿಕೆ ತೊಡಿಸಿ, ಬಿಳಿ ಬಟ್ಟೆಯ ಮೇಲೆ ಮಲಗಿಸಿ, ತಲೆಯ ಬಳಿ ತೋರಣದಂತೆ ಮಾವಿನ ಎಲೆಗಳನ್ನು ಇರಿಸಿ. ಪಕ್ಕದಲ್ಲಿ ವೀಳದ್ಯೆಲೆಗಳಿಂದ ಆಕೆಗೆ ಎಷ್ಟು ತಿಂಗಳು ಎಂಬುದನ್ನು ಬರೆಯಿರಿ. ಇದರ ಮೇಲೆ ಹಬ್ಬದೂಟ ಬಡಿಸಿ, ಫೋಟೊ ಶೂಟ್ ಮಾಡಿಸಿ. ಇದು ಯುಗಾದಿ ಹೇಳಿ ಮಾಡಿಸಿದ ಪರಿಕಲ್ಪನೆಯಾಗಿದೆ.

ಯುಗಾದಿ ಹಬ್ಬಕ್ಕೆ ನಿಮ್ಮ ಮನೆ ಮಹಾರಾಜನಿಗೆ ಸಿಂಪಲ್‌ ಆಗಿ, ಡಿಫ್ರೆಂಟ್ ಆಗಿ ...