Bangalore, ಫೆಬ್ರವರಿ 8 -- ಉಡುಪಿ ಶ್ರೀ ಕೃಷ್ಣ ದೇವಸ್ಥಾನದ ಕನಕನ ಕಿಂಡಿ ದರ್ಶನ ಮಾಡಿರುವ ರೀಲ್ಸ್‌ ಅನ್ನು ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಯಾಗಿದ್ದ ಗೌತಮಿ ಯಾದವ್‌ ಹಂಚಿಕೊಂಡಿದ್ದಾರೆ. ಇವರು ತನ್ನ ಪತಿ ಅಭಿಷೇಕ್‌ ಜಾದವ್‌ ಜತೆಗೆ ಉಡುಪಿ ರಥಬೀದಿಯಲ್ಲಿ ಸುತ್ತಾಡಿರುವ ಝಲಕ್‌ ನೀಡಿದ್ದಾರೆ. ಕಂಡೆ ನಾ ಉಡುಪಿಯ ಕೃಷ್ಣರಾಯನ್ನ , ಭೂ- ಮಂಡಲದೊಳಗೆ ಉದ್ದಂಡ ಮೋಹಿನಿ ಎಂಬ ಭಕ್ತಿಗೀತೆಯನ್ನು ಹೊಂದಿರುವ ರೀಲ್ಸ್‌ ಮೂಲಕ ಗೌತಮಿ ಭಕ್ತಿಪರವಶರಾಗಿ ಕಾಣಿಸಿಕೊಂಡಿದ್ದಾರೆ.

ಬಿಗ್‌ಬಾಸ್‌ ಕನ್ನಡ ಖ್ಯಾತಿಯ ಗೌತಮಿ ರೀಲ್ಸ್‌ಗೆ ಅಭಿಮಾನಿಗಳು ನಾನಾ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಕನಕನ ಕಿಂಡಿಯ ನೋಡಿ ಪುನೀತರಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು "ಬಿಗ್‌ಬಾಸ್‌ನಲ್ಲಿ ನಿಮ್ಮ ಆಟ ಚೆನ್ನಾಗಿತ್ತು" ಎಂದು ನೆನಪಿಸಿಕೊಂಡಿದ್ದಾರೆ. ಸದ್ಯ ಇವರು ಹಂಚಿಕೊಂಡಿರುವ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಗೌತಮಿ ಜಾದವ್ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ 4ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದರ...