ಭಾರತ, ಏಪ್ರಿಲ್ 12 -- ಉಡುಪಿ ಶ್ರೀ ಕೃಷ್ಣ ಮಠವು ಧಾರ್ಮಿಕ ವಾತಾವರಣದಲ್ಲಿ ಕೆಲವರ ಅನುಚಿತ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಜೋಡಿ ಫೋಟೋಶೂಟ್ ಮಾಡುವಂತಿಲ್ಲ ಎಂಬ ಸೂಚನೆ ನೀಡಿದೆ.
ಅದರಲ್ಲೂ ಮುಖ್ಯವಾಗಿ ಉಡುಪಿ ರಥಬೀದಿಯಲ್ಲಿ ನಿಷೇಧ ಜಾರಿಯಾಗಿದೆ. ಶ್ರೀಕೃಷ್ಣ ಮಠ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಶ್ರೀಕೃಷ್ಣಮಠ ಪಾರಂಪರಿಕ ಕಟ್ಟಡಗಳಿರುವ ತಾಣವಾಗಿರುವ ಕಾರಣ ಸಾಕಷ್ಟು ಜನ ಬಂದು ಈ ಸುಂದರ ತಾಣದಲ್ಲೇ ಫೋಟೋ ತೆಗೆಸಿಕೊಳ್ಳಬೇಕೆಂಬ ಬಯಕೆ ಹೊಂದಿರುತ್ತಾರೆ.
ಸ್ವಾಮೀಜಿಗಳ ಓಡಾಟಕ್ಕೆ ಮತ್ತು ಅಲ್ಲಿನ ಸಾರ್ವಜನಿಕರಿಗೆ ಮುಜುಗರ ಉಂಟಾಗುತ್ತಿದ್ದ ಕಾರಣಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದೆ.
ಅಷ್ಟ ಮಠಾಧೀಶರು ಓಡಾಡುವ ರಥಬೀದಿ. ನೂರಾರು ವರ್ಷಗಳಿಂದ ಯತಿಗಳು, ದಾಸರು ನಡೆದಾಡುವ ಪವಿತ್ರ ಜಾಗ. ಇದಕ್ಕೆ ಪಾವಿತ್ರ್ಯತೆ ಇದೆ. ಪ್ರತಿದಿನ ರಥಬೀದಿಯಲ್ಲಿ ದೇವರ ಉತ್ಸವ ನಡೆಯುತ್ತಿದೆ. ಇಂತಹ ಪವಿತ್ರ ಸ್ಥಳಗಳಲ್ಲಿ ಫೋಟೋಶೂಟ್, ಜೋಡಿಗಳ ಸರಸ ಸರಿಯಲ್ಲ. ಮುಜುಗರದ ಸನ್ನಿವೇಶ ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ ಎಂದು ತ...
Click here to read full article from source
To read the full article or to get the complete feed from this publication, please
Contact Us.