Udupi, ಏಪ್ರಿಲ್ 10 -- Udupi Pre Wedding Shooting: ಉಡುಪಿ ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ನಿಷೇಧಿಸಲಾಗಿದೆ. ಈ ಬಗ್ಗೆ ಪರ್ಯಾಯ ಪುತ್ತಿಗೆ ಮಠ ಪ್ರಕಟಣೆ ಹೊರಡಿಸಿದೆ. ಶ್ರೀಕೃಷ್ಣ ಮಠ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶ್ರೀಕೃಷ್ಣ ಮಠದ ರಥ ಬೀದಿಯಲ್ಲಿ ಪ್ರಿ ವೆಡ್ಡಿಂಗ್, ಪೋಸ್ಟ್ ವೆಡ್ದಿಂಗ್ ಫೋಟೋ ಶೂಟ್ ಗಳಿಗೆ ನಿಷೇಧ ವಿಧಿಸಿದೆ. ಫೋಟೋ ಶೂಟ್ ನಿಂದಾಗಿ ಸ್ವಾಮೀಜಿಗಳ ಓಡಾಟಕ್ಕೆ ಹಾಗೂ ಮುಂಜಾನೆ ಮುಜುಗರದ ಸನ್ನಿವೇಶ ಸೃಷ್ಟಿಯಾಗುತ್ತದೆ. ಇದನ್ನು ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ. ಶ್ರೀಕೃಷ್ಣಮಠ ಪಾರಂಪರಿಕ ಕಟ್ಟಡಗಳಿರುವ ತಾಣ. ಪ್ರಿ ವೆಡ್ದಿಂಗ್ ಹಾಗೂ ಪೋಸ್ಟ್ ವೆಡ್ಡಿಂಗ್ ಫೋಟೋಶೂಟ್ ಹೆಸರಿನಲ್ಲಿ ಬೆಳ್ಳಂಬೆಳಿಗ್ಗೆ ಮಠದ ಆವರಣದಲ್ಲಿ ಅಸಭ್ಯ ವರ್ತನೆ ಕಾಣುತ್ತದೆ. ಫೋಟೋಶೂಠ್ ಹೆಸರಲ್ಲಿ ಮಠದ ರಥಬೀದಿಯಲ್ಲಿ ಸರಸ ಸಲ್ಲಾಪ ನಡೆಯುತ್ತಿದೆ. ಕೇರಳ, ಬೆಂಗಳೂರು ಕಡೆಗಳಿಂದ ಬರುವ ಫೋಟೋಗ್ರಾಫರ್ಸ್ ಹಾವಳಿಯೂ ಹೆಚ್ಚಾಗಿದೆ ಹೀಗಾಗಿ ಮಠದ ರಥಬೀದಿಯಲ್ಲಿ ಫೋಟೋಶೂಟ್ ನಿಷೇ...