ಭಾರತ, ಮಾರ್ಚ್ 13 -- Types of Tourism: ಪ್ರವಾಸ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಪ್ರವಾಸ ಎನ್ನುವುದು ಕೇವಲ ಮನಸ್ಸಿಗೆ ಖುಷಿ ಕೊಡುವ ಸಂಗತಿ ಮಾತ್ರವಲ್ಲ, ಇದರಿಂದ ಬೇರೆ ಬೇರೆ ಸ್ಥಳಗಳನ್ನು ನೋಡುವ ಜೊತೆಗೆ ಅಲ್ಲಿನ ಪರಿಸರ, ಆಹಾರ, ಜನಜೀವನ, ಜೀವವೈವಿಧ್ಯ ಎಲ್ಲವನ್ನೂ ತಿಳಿದುಕೊಳ್ಳುವ ಅವಕಾಶ ನಮ್ಮದಾಗುತ್ತದೆ. ಪ್ರವಾಸ ಅಥವಾ ಪ್ರವಾಸೋದ್ಯಮ ಎನ್ನುವುದು ಕೇವಲ ಒಂದು ವಿಧಕ್ಕೆ ಸೀಮಿತವಾಗಿಲ್ಲ. ಪ್ರವಾಸೋದ್ಯಮದಲ್ಲೂ ಹಲವಾರು ವಿಧಗಳಿವೆ.

ಸಾಂಸ್ಕೃತಿಕ ಪ್ರವಾಸೋದ್ಯಮ, ಸಾಹಸ ಪ್ರವಾಸೋದ್ಯಮ, ಬೀಚ್ ಟೂರಿಸಂ, ಇಕೋ ಟೂರಿಸಂ ಹೀಗೆ ಸಾಕಷ್ಟು ವಿಧಗಳಿವೆ. ಅವರವರ ಆಸಕ್ತಿಗೆ ತಕ್ಕಂತೆ ಅವರವರಿಗೆ ಈ ಪ್ರವಾಸೋದ್ಯಮದ ಸ್ಥಳಗಳು ಇಷ್ಟವಾಗುತ್ತದೆ. ಇಂದಿನ ಲೇಖನದಲ್ಲಿ 15 ವಿವಿಧ ಬಗೆಯ ಪ್ರವಾಸೋದ್ಯಮಗಳು ಹಾಗೂ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಯಾವ ಪ್ರವಾಸೋದ್ಯಮಕ್ಕೆ ಯಾವ ಜಾಗ ಬೆಸ್ಟ್ ಎನ್ನುವ ವಿವರ ನೀಡಲಾಗಿದೆ. ಇದರಲ್ಲಿ ನಿಮಗೆ ಯಾವುದು ಇಷ್ಟವಾಗಬಹುದು ನೋಡಿ ಅಲ್ಲಿಗೆ ಒಮ್ಮೆ ತೆರಳಿ ಎಂಜಾಯ್ ಮಾಡಿ.

ಸ್ಥಳೀಯ ಸಂಪ್ರದಾಯಗ...