Tumkur, ಫೆಬ್ರವರಿ 27 -- ಕಲ್ಪತರು ನಾಡು ತುಮಕೂರಿನಲ್ಲಿ ಗುರುವಾರ ಎಲ್ಲಿ ನೋಡಿದರೂ ಜನವೋ ಜನ. ಸಿದ್ದಗಂಗಾ ಮಠದ ಸಿದ್ದಲಿಂಗೇಶ್ವರ ಜಾತ್ರೆಯ ರಥೋತ್ಸವದ ಸಡಗರ.

ಪ್ರತಿ ವರ್ಷ ಫೆಬ್ರವರಿ ಇಲ್ಲವೇ ಮಾರ್ಚ್‌ನಲ್ಲಿ ಸಿದ್ದಗಂಗಾ ಜಾತ್ರೆ ಎರಡು ವಾರ ಕಾಲ ನಡೆಯುತ್ತದೆ. ಈ ಭಾರಿ ಫೆಬ್ರವರಿ ಕೊನೆ ವಾರದಲ್ಲಿ ರಥೋತ್ಸವ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ವಿಶೇಷವಾಗ ಅಲಂಕರಿಸಿದ್ದ ರಥವನ್ನು ಭಕ್ತರು ಮಠದ ಆವರಣದಲ್ಲಿ ಭಕ್ತಿ ಭಾವಗಳಿಂದ ಎಳೆಯುವ ಮೂಲಕ ಪುನೀತರಾದರು.

ತುಮಕೂರಿನ ಸಿದ್ದಗಂಗಾ ಮಠವು ಸಿದ್ದಲಿಂಗೇಶ್ವರರ ರಥೋತ್ಸವಕ್ಕೆ ಭರ್ಜರಿ ತಯಾರಿ ಮಾಡುತ್ತದೆ. ತುಮಕೂರು ಮಾತ್ರವಲ್ಲದೇ ಕರ್ನಾಟಕದ ಹಲವು ಭಾಗಗಳಿಂದ ಭಕ್ತರು ರಥೋತ್ಸವಕ್ಕೆ ಆಗಮಿಸುತ್ತಾರೆ.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರರ ರಥೋತ್ಸವದ ಮುಂಚೂಣಿಯಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಹಾಗೂ ಇತರ ಹರಗುರು ಚರ ಮೂರ್ತಿಗಳೂ ಭಾಗಿಯಾದರು

ಈ ಬಾರಿಯೂ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವದ ಭಾಗವಾಘಿ ಆಕರ್ಷಕ ಉತ್ಸವ ಮೂರ್ತಿಯ...