Tumkur, ಮಾರ್ಚ್ 2 -- ಸತತ ಹತ್ತು ದಿನಗಳಿಂದ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಜಾತ್ರಾ ಸಡಗರ ಮನೆ ಮಾಡಿದೆ. ಶನಿವಾರ ರಾತ್ರಿ ತೆಪ್ಪೋತ್ಸವದ ವೈಭವ ಕಳೆಗಟ್ಟಿತ್ತು.

ವಿಶೇಷವಾಗಿ ಅಲಂಕರಿಸಿದ್ದ ದೋಣಿಯಲ್ಲಿ ತೆಪ್ಪೋತ್ಸವದ ವಾಹನವನ್ನು ಇರಿಸಿ ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿರುವ ಕೆರೆಯಲ್ಲಿ ಸುತ್ತು ಹಾಕಲಾಯಿತು.

ತುಮಕೂರು ಮಾತ್ರವಲ್ಲದೇ ಸುತ್ತಮುತ್ತಲಿನ ಪ್ರದೇಶದಿಂದಲೂ ಭಕ್ತರು ಆಗಮಿಸಿ ತೆಪ್ಪೋತ್ಸವ ವೈಭವ ಕಣ್ತುಂಬಿಕೊಂಡರು.

ಅಲಂಕೃತ ವಾಹನವನ್ನು ತೆಪ್ಪದಲ್ಲಿ ಇರಿಸಿ ವಿಶೇಷ ಪೂಜೆ ಸಲ್ಲಿಸಿ ಸುತ್ತು ಹಾಕಿ ಬಂದಾಗ ಹತ್ತಿರದಿಂದ ಸಿದ್ದಲಿಂಗೇಶ್ವರರ ಮೂರ್ತಿ ಕಂಡು ಭಕ್ತರು ನಮಸ್ಕರಿಸುವ ಭಕ್ತಿ ಭಾವದ ಕ್ಷಣಕ್ಕೆ ಇದು ಸಾಕ್ಷಿಯಾಯಿತು.

ತುಮಕೂರು ಸಿದ್ದಗಂಗಾ ಮಠದ ತೆಪ್ಪೋತ್ಸವಕ್ಕೆ ವಾಹನವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಬೆಳಕುಗಳ ಸಂಯೋಜನೆಯೂ ಅತ್ಯುತ್ತಮವಾಗಿ ಭಕ್ತರ ಗಮನ ಸೆಳೆಯುತ್ತದೆ.

ಈ ಬಾರಿ ಸಿದ್ದಗಂಗಾ ಮಠದ ತೆಪ್ಪೋತ್ಸವಕ್ಕೆ ಉತ್ಸವವನ್ನು ಬಗೆಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಶುಕ್ರವಾರ ರ...