Tumkur, ಫೆಬ್ರವರಿ 17 -- Tumkur Siddaganga Jatre 2025: ಅಪ್ಪಟ ಗ್ರಾಮೀಣ ಸೊಗಡಿನ ತುಮಕೂರು ಸಿದ್ದಗಂಗಾ ಮಠ ಆಯೋಜಿಸುವ 2025ನೇ ಸಿದ್ಧಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸಿದ್ದತೆಗಳು ಜೋರಾಗಿವೆ. ಫೆಬ್ರವರಿ 17ರಿಂದಲೇ ಜಾತ್ರಾ ಮಹೋತ್ಸವದ ಚಟುವಟಿಕೆಗಳು ಕಲ್ಪತರು ನಾಡು ತುಮಕೂರಿನಲ್ಲಿ ಶುರುವಾಗಲಿವೆ. ಜಾತ್ರಾ ಮಹೋತ್ಸವದ ಅಂಗವಾಗಿ ದನಗಳ ಪರಿಷೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕೋತ್ಸವ, ಕೃಷಿ ಹಾಗೂ ಕೈಗಾರಿಕಾ ವಸ್ತುಪ್ರದರ್ಶನಗಳು ಇರಲಿವೆ. ಈಗಾಗಲೇ ತುಮಕೂರು ಮಾತ್ರವಲ್ಲದೇ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಚಿತ್ರದುರ್ಗ, ಹಾಸನ ಭಾಗದಿಂದಲೂ ನೂರಾರು ರಾಸುಗಳು ದನಗಳ ಪರಿಷೆಗೆ ಬಂದಿವೆ. ವಸ್ತುಪ್ರದರ್ಶನದಲ್ಲೂ ಮಳಿಗೆಗಳ ಕಾರ್ಯ ಪೂರ್ಣಗೊಂಡಿದೆ. ಸಿದ್ದಗಂಗಾ ಮಠದ ಆವರಣ ಮುಂದಿನ ಎರಡು ವಾರ ಕಾಲ ಭಕ್ತರಿಂದ ತುಂಬಿರಲಿದೆ. ದೀಪಾಲಂಕಾರದ ಜತೆಗೆ ಸಂಸ್ಕೃತಿಯ ಅಂಗಳವಾಗಿ ಮಿಂಚಲಿದೆ.

Published by HT Digital Content Services with permission from HT Kannada....