Tumkur, ಮೇ 6 -- ತುಮಕೂರು: ಭಕ್ತರ ಹರಕೆ ಈಡೇರಿಕೆಗೆ ಜಾಲಿ ಮುಳ್ಳಿನ ಗದ್ದುಗೆಯಲ್ಲಿ ಮಲಗುವ ರಾಮಪ್ಪ ದೇವರು ಸಾವಿರಾರು ಭಕ್ತರ ಆರಾಧ್ಯ ದೈವವಾಗಿದೆ. ಜಿಲ್ಲೆ ಗುಬ್ಬಿ ತಾಲೂಕಿನ ಕಸಬಾ ಹೋಬಳಿ ತೊರೇಹಳ್ಳಿ ಗ್ರಾಮದಲ್ಲಿರುವ ರಾಮ ದೇವರ ದೇಗುಲದಲ್ಲಿ ಹರಕೆ ಹೊತ್ತ ಭಕ್ತರು ಮುಳ್ಳಿನ ಗದ್ದುಗೆ ಸಿದ್ಧ ಪಡಿಸಿರುತ್ತಾರೆ, ರಾಮಪ್ಪ ದೇವರು ಮುಖವಾಡ ಹೊತ್ತ ಅರ್ಚಕರ ಕೈಯಲ್ಲಿ ಬೆತ್ತ ಹಾಗೂ ಚಾಟಿ ಹಿಡಿದು ದೇವರು ಆಡಿಸುವಾಗ ಗ್ರಾಮಸ್ಥರಿಗೆ ಚುರುಕು ಮುಟ್ಟಿಸುವುದು ಉಂಟು. ದೇಗುಲದಿಂದ ಮೆರವಣಿಗೆ ಮೂಲಕ ಹಾದು ಹೋಗುವ ರಾಮಪ್ಪ ದೇವರ ಮುಖವಾಡ ಧರಿಸಿದ ಅರ್ಚಕರು ಮಾರ್ಗ ಮಧ್ಯೆ ಹಲವು ಭಕ್ತರ ಮನೆಯಲ್ಲಿ ವಿಶೇಷ ಪೂಜೆ ಸ್ವೀಕರಿಸುತ್ತಾರೆ, ದಾರಿಯುದ್ದಕ್ಕೂ ಅರೇವಾದ್ಯ, ಡೋಲು ವಾದ್ಯಕ್ಕೆ ತಕ್ಕಂತೆ ನರ್ತಿಸುತ್ತಾ ಸಾಗುವ ದೇವರನ್ನು ರೇಗಿಸುವ ಯುವಕ ಪಡೆ ಚಾಟಿ ಏಟಿಗೆ ಮೈವೊಡ್ಡಿ ನಿಲ್ಲುವರು.

ಮುಳ್ಳನ್ನು ಬಳಸಿ ದೇವರಿಗೆ ಪೂಜೆ ಮಾಡುವ ಸಂಪ್ರದಾಯ ಹಲವು ಕಡೆಗಳಲ್ಲಿ ಇದೆ. ಕಾರೇಮುಳ್ಳನ್ನು ಹಾಕಿ ಅದನ್ನು ತುಳಿಯುವ ಸಂಪ್ರದಾಯಗಳೂ ಇವೆ. ಅಂದರೆ ಕ...