Bangalore, ಏಪ್ರಿಲ್ 12 -- ತೃಪ್ತಿ ದಿಮ್ರಿ ಅನಿಮಲ್‌ ಸಿನಿಮಾದಲ್ಲಿ ನಟಿಸಿ ದೇಶ-ವಿದೇಶದ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದಾದ ಬಳಿಕ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಕಳೆದ ವರ್ಷ ಈಕೆ ನಟಿಸಿದ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಸಾಧನೆಗಳನ್ನು ಮಾಡಿಲ್ಲ. 2025ರಲ್ಲಿ ಇಲ್ಲಿಯವರೆಗೆ ತೃಪ್ತಿ ದಿಮ್ರಿ ಯಾವುದೇ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

ಆರಂಭದಲ್ಲಿ ಆಶಿಕಿ 3 ಸಿನಿಮಾದಲ್ಲಿ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸಲಿದ್ದಾರೆ ಎಂದು ವದಂತಿಗಳಿದ್ದವು. ಆದರೆ, ತೃಪ್ತಿ ದಿಮ್ರಿ ಅವರ ಬೋಲ್ಡ್‌ ಇಮೇಜ್‌ನಿಂದಾಗಿ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ ಎಂದು ಬಾಲಿವುಡ್‌ ವಲಯದಲ್ಲಿ ಸುದ್ದಿಯಾಗಿದೆ.

ಆಶಿಕಿ 3 ಸಿನಿಮಾದಲ್ಲಿ ತೃಪ್ತಿ ದಿಮ್ರಿ ಬದಲಿಗೆ ನಟಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ಈ ಮೂಲಕ ತೃಪ್ತಿ ದಿಮ್ರಿ ಪಡೆಯಬೇಕಿದ್ದ ಆಫರ್‌ ಶ್ರೀಲೀಲಾ ಪಾಲಾಗಿದೆ ಎನ್ನಲಾಗುತ್ತಿದೆ.

ಬಾಲಿವುಡ್‌ ನಟಿ ತೃಪ್ತಿ ದಿಮ್ರಿ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪ್ರವೇಶಿಸಲಿದ್ದಾರೆ ಎಂದು ವ...