Bengaluru, ಮಾರ್ಚ್ 22 -- Toxic Release Date: ಸ್ಯಾಂಡಲ್‌ವುಡ್‌ ರಾಕಿಂಗ್‌ ಸ್ಟಾರ್‌ ಯಶ್‌, ಕೇವಲ ಪ್ಯಾನ್‌ ಇಂಡಿಯನ್‌ ಹೀರೋ ಅಲ್ಲ, ಪ್ಯಾನ್‌ ವರ್ಲ್ಡ್‌ ಹೀರೋ ಆಗಲು ಹೊರಟಿದ್ದಾರೆ. ಆ ನಿಟ್ಟಿನಲ್ಲಿ ಗೀತು ಮೋಹನ್‌ ದಾಸ್‌ ನಿರ್ದೇಶನದಲ್ಲಿ ಟಾಕ್ಸಿಕ್‌ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಸಣ್ಣ ಸಣ್ಣ ಝಲಕ್‌ಗಳು, ಸಿನಿಮಾ ಅಭಿಮಾನಿಗಳಿಗೆ ಬೆರಗು ಮೂಡಿಸಿವೆ. ಭಾರತದ ಕಲಾವಿದರು ಮಾತ್ರವಲ್ಲದೆ, ಹಾಲಿವುಡ್‌ನಲ್ಲಿ ಗುರುತಿಸಿಕೊಂಡ ಎಷ್ಟೋ ನಟರು ಟಾಕ್ಸಿಕ್‌ ಸಿನಿಮಾದ ಭಾಗವಾಗಿದ್ದಾರೆ. ಹೀಗಿರುವಾಗಲೇ ಇದೀಗ ಇದೇ ಚಿತ್ರದಿಂದ ಬಹುದೊಡ್ಡ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಅದೇನೆಂದರೆ, ಟಾಕ್ಸಿಕ್‌ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. 2026ರ ಮಾರ್ಚ್‌ 19ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.

ಸುದ್ದಿ ಅಪ್‌ಡೇಟ್‌ ಆಗಲಿದೆ.

Published by HT Digital Content Services with permission from HT Kannada....