ಭಾರತ, ಫೆಬ್ರವರಿ 8 -- ಪ್ರೇಮಿಗಳ ದಿನ ಬಹಳ ಹತ್ತಿರದಲ್ಲಿದೆ. ತಮ್ಮ ಪ್ರೀತಿ ಪಾತ್ರರಿಗಾಗಿ ಉಡುಗೊರೆ, ಸರ್ಪೈಸ್ ಇತ್ಯಾದಿ ಕೊಡಲು ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಪ್ರೀತಿಸುತ್ತಿರುವವರಿಗೆ ವ್ಯಾಲೆಂಟೈನ್ಸ್ ಡೇ ಬಹಳ ವಿಶೇಷ ದಿನ. ಪ್ರೇಮಿಗಳಿಗೆಂದೇ ಆಚರಿಸುವ ಈ ದಿನವನ್ನು ಜಗತ್ತಿನಲ್ಲಿರುವ ಎಲ್ಲಾ ಪ್ರೇಮಿಗಳು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ, ಕೆಲವೊಬ್ಬರ ಪ್ರೀತಿಯು ಈ ದಿನವೇ ಕೊನೆಯಾಗಬಹುದು.

ಪ್ರೀತಿ ಅಂದರೆ ಒಬ್ಬರಿಗೊಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಜೊತೆಯಾಗಿ ಜೀವನ ನಡೆಸುವುದು. ಆದರೆ, ಕೆಲವೊಮ್ಮೆ ಅತಿಯಾದ ಪ್ರೀತಿಯು ಸಂಗಾತಿಗೆ ದುಸ್ವಪ್ನವಾಗಿ ಪರಿಣಮಿಸಬಹುದು. ಈ ವಿಷಕಾರಿ ಅಥವಾ ಕೆಟ್ಟ ಸಂಬಂಧದಿಂದ ಹೊರಬರಲು ಕಷ್ಟವಾದರೂ, ಉತ್ತಮ ಜೀವನಕ್ಕಾಗಿ ಹೊರಬರಲೇಬೇಕು. ನೀವು ಈ ಪರಿಸ್ಥಿತಿಯೊಳಗಿದ್ದರೆ ವಿಲವಿಲನೆ ಒದ್ದಾಡದೆ ಅದರಿಂದಾಚೆ ಬನ್ನಿ. ಕೆಟ್ಟ ಸಂಬಂಧ ಅಂದ್ರೆ ಏನು, ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

ಮೊದ ಮೊದಲ ಪ್ರೀತಿ ತುಂಬಾ ಚೆನ್ನಾಗಿರುತ್ತದೆ. ಆದರೆ, ಬರುಬರುತ್ತಾ ಅದು ಮ...