Bangalore, ಮಾರ್ಚ್ 13 -- Yash Toxic Movie: ಕನ್ನಡದ ಚಿತ್ರಕ್ಕೆ ಮೊದಲ ಬಾರಿಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಜೆಜೆ ಪೆರ್ರಿ ಫೈಟ್ ಕಂಪೋಸ್ ಮಾಡಿದ್ದಾರೆ. ರಾಕಿಭಾಯ್ ಟಾಕ್ಸಿಕ್‌ ಸಿನಿಮಾದ ಆಕ್ಷನ್ ಸೀಕ್ಷೇನ್ಸ್ ಡೈರೆಕ್ಷನ್ ಮಾಡಿ ತಾಯ್ನಾಡಿಗೆ ಜೆಜೆ ಪೆರ್ರಿ ವಾಪಸ್ಸಾಗಿದ್ದಾರೆ. ಜೆಜೆ ಪೆರ್ರಿ ಹಾಲಿವುಡ್ ಸೂಪರ್‌ಸ್ಟಾರ್‌ ಸ್ಟಂಟ್ ಮಾಸ್ಟರ್ ಆಗಿ ಖ್ಯಾತಿ ಪಡೆದಿದ್ದಾರೆ. ಟಾಕ್ಸಿಕ್ ಚಿತ್ರಕ್ಕಾಗಿ ಭಾರತಕ್ಕೆ ಜೆಜೆ ಪೆರ್ರಿ ಆಗಮಿಸಿದ್ದರು. ಇದೀಗ ಟಾಕ್ಸಿಕ್ಸ್ ಶೂಟಿಂಗ್ ಮುಗಿಸಿ ಮತ್ತೆ ಹಾಲಿವುಡ್‌ಗೆ ವಾಪಸ್ಸಾಗಿದ್ದಾರೆ. ಈ ಸಂದರ್ಭದಲ್ಲಿ ಯಶ್‌ ಜತೆ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದು ಹಾಲಿವುಡ್‌ನ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಹೇಳಿದ್ದಾರೆ.

ಹಾಲಿವುಡ್‌ನ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹೀಗೆ ಪೋಸ್ಟ್‌ ಮಾಡಿದ್ದಾರೆ. "ಇದು ಒಂದು ಬ್ಯಾಂಗರ್! ನನ್ನ ಸ್ನೇಹಿತ ಯಶ್‌ ಅವರೊಂದಿಗೆ ಟಾಕ್ಸಿಕ್‌ ಸಿನಿಮಾದಲ್ಲಿ ಕೆಲಸ ಮಾಡಿರುವುದು ಖುಷಿ ತಂದಿದೆ. ನಾನು ಭಾರತದಲ್ಲಿ ಉತ್ತಮ ಪ್ರದರ್ಶನ ನ...