Bengaluru, ಫೆಬ್ರವರಿ 26 -- Top 5 Defence Exams in India: 10ನೇ ತರಗತಿ, 12ನೇ ತರಗತಿಗೆ ಬರುತ್ತಲೇ ಅನೇಕರಲ್ಲಿ ಉದ್ಯೋಗದ ಬಗ್ಗೆ ಕನಸುಗಳು ಮೊಳಕೆಯೊಡಲಾರಂಭಿಸುತ್ತವೆ. ಅನೇಕರು ಸೇನೆ ಸೇರಬೇಕು ಎಂದು ಬಯಸುತ್ತಾರೆ. ಆದರೆ ಹೀಗೆ ಕನಸು ಕಂಡವರಿಗೆಲ್ಲ ಭಾರತೀಯ ಸೇನೆಯಲ್ಲಿ ಉದ್ಯೋಗ ದೊರಕುತ್ತದೆ ಎಂದೇನೂ ಇಲ್ಲ. ಭಾರತೀಯ ಸೇನೆ ಸೇರಬೇಕಾದರೆ ಕೆಲವು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಶೈಕ್ಷಣಿಕ ಹಾಗೂ ಶಾರೀರಿಕ, ಆರೋಗ್ಯ ಮಾನದಂಡಗಳನ್ನು ಪೂರೈಸಬೇಕು. ಅದಕ್ಕೂ ಮೊದಲು ಭಾರತದ ಸೇನೆ ಸೇರುವುದಕ್ಕೆ ಇರುವ ಟಾಪ್ 5 ಡಿಫೆನ್ಸ್ ಎಕ್ಸಾಂಗಳ ಬಗ್ಗೆ ತಿಳಿಯೋಣ.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ)/ ನೇವಲ್ ಅಕಾಡೆಮಿ (ಎನ್‌ಎ) ಎಕ್ಸಾಂ: ವರ್ಷಕ್ಕೆ ಎರಡು ಬಾರಿ ಎನ್‌ಡಿಎ/ಎನ್‌ ಪರೀಕ್ಷೆಗಳು ನಡೆಯುತ್ತವೆ. 12ನೇ ತರಗತಿ ಉತ್ತೀರ್ಣರಾದವರು ಈ ಪರೀಕ್ಷೆ ಬರೆಯಬಹುದು. ಎನ್‌ಡಿಎ/ಎನ್‌ಎ ಪರೀಕ್ಷೆ ಬರೆದು ಉತ್ತೀರ್ಣರಾದರೆ ಸೇನೆ,ನೌಕಾ ಸೇನೆ ಹಾಗೂ ವಾಯುಪಡೆಗಳನ್ನು ಸೇರಿ ಕೆಲಸ ಮಾಡಬಹುದು.

ಏರ್‌ಫೋರ್ಸ್‌ ಕಾಮನ್ ಅಡ್ಮಿಷನ್ ಟೆ...