ಭಾರತ, ಮಾರ್ಚ್ 1 -- ವಿಶ್ವದ ಕಠಿಣಾತಿ ಕಠಿಣ ಪರೀಕ್ಷೆಗಳ ಬಗ್ಗೆ ನಿಮಗೆ ತಿಳಿದಿದೆಯೇ? ಹಾಗೆ ನೋಡಿದರೆ ನಮ್ಮ ನೆರೆಯ ದೇಶದ ಪರೀಕ್ಷೆ ಮೊದಲ ಸ್ಥಾನದಲ್ಲಿದೆ. ನಮ್ಮ ದೇಶದ ಎಷ್ಟು ಪರೀಕ್ಷೆಗಳು ಟಾಪ್ 10 ಪಟ್ಟಿಯಲ್ಲಿ ಬರುತ್ತವೆ, ವಿಶ್ವದ ಟಾಪ್ 10 ಅತಿ ಕಠಿಣ ಪರೀಕ್ಷೆಗಳ ಪಟ್ಟಿಯನ್ನೊಮ್ಮೆ ನೋಡೋಣ.

ಜಗತ್ತಿನ ಅತಿಕಠಿಣವೆನಿಸಿದ 10 ಪರೀಕ್ಷೆಗಳಿವು (Top 10 Toughest Exams in the World) ನಮ್ಮ ದೇಶದಲ್ಲಿ ಅತಿಕಠಿಣ ಪರೀಕ್ಷೆ ಯಾವುದು? ಎಂದು ಯಾರಾದರೂ ಕೇಳಿದರೆ ಅನೇಕರು ಯುಪಿಎಸ್‌ಸಿ ಎಂದು ಹೇಳಿಬಿಡುತ್ತಾರೆ. ಹೌದು, ಕೇಂದ್ರೀಯ ಲೋಕಸೇವಾ ಆಯೋಗ ಅಥವಾ ಯುಪಿಎಸ್ಸಿ ಪರೀಕ್ಷೆಯನ್ನು ಭಾರತ ಮತ್ತು ಪ್ರಪಂಚದ ಕಠಿಣ ಪರೀಕ್ಷೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದರೆ, ವಿಶ್ವದ ಕಠಿಣಾತಿಕಠಿಣ ಪರೀಕ್ಷೆಗಳ ಬಗ್ಗೆ ತಿಳಿದಿದೆಯೇ? ಈಗಂತೂ ಪರೀಕ್ಷೆಗಳ ಕಾಲ. ಹಾಗಾಗಿ, ಜಗತ್ತಿನಲ್ಲೇ ಅತಿಕಠಿಣವೆನಿಸಿದ ಟಾಪ್ 10 ಪರೀಕ್ಷೆಗಳ ಬಗ್ಗೆ ತಿಳಿಯೋಣ.

ಗಾವೋಕಾವೋ ಪರೀಕ್ಷೆ (Gaokao Exam): ನಮ್ಮ ನೆರೆಯ ದೇಶವಾದ ಚೀನಾ, ವಿಶ್ವದ ಕಠಿಣಾತಿಕ...