Bengaluru, ಮಾರ್ಚ್ 15 -- Top 10 OTT Releases: ಒಟಿಟಿಯಲ್ಲಿ ಹೊಸ ಚಲನಚಿತ್ರಗಳನ್ನು ನೋಡಲು ಬಯಸುವವರಿಗೆ ಈ ವಾರ ಅಕ್ಷರಶಃ ಜಾತ್ರೆ. 20 ಪ್ಲಸ್‌ ಸಿನಿಮಾಗಳು ಈ ವಾರ ಒಟಿಟಿ ಅಂಗಳಕ್ಕೆ ಬಂದಿವೆ. ಕ್ರೈಮ್ ಥ್ರಿಲ್ಲರ್ ಸಿನಿಮಾದಿಂದ ಹಿಡಿದು, ಕಾಮಿಡಿ, ಸೆಂಟಿಮೆಂಟ್‌, ಆಕ್ಷನ್‌ ಸೇರಿ ಇನ್ನೂ ಹಲವು ಪ್ರಕಾರದ ಸಿನಿಮಾಗಳನ್ನು ವೀಕ್ಷಣೆ ಮಾಡಬಹುದು. ಆ ಪೈಕಿ, ಟಾಪ್‌ 10 ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಮಲಯಾಳಿ ನಟ ಬೆಸಿಲ್ ಜೋಸೆಫ್ ಅಭಿನಯದ ಪೊನ್ಮನ್ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ವಾರ ಸ್ಟ್ರೀಮಿಂಗ್‌ ಆರಂಭಿಸಿದೆ. ಮಲಯಾಳಂನ ಈ ಡಾರ್ಕ್ ಕಾಮಿಡಿ ಸಿನಿಮಾ ಕನ್ನಡದ ಜತೆಗೆ ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜೋತೀಶ್ ಸಂತೋಷ್ ನಿರ್ದೇಶನದ ಈ ಚಿತ್ರವು ಚಿತ್ರಮಂದಿರಗಳಲ್ಲಿ ಸೂಪರ್ ಹಿಟ್ ಆಗಿತ್ತು.

ತೆಲುಗು ಆಕ್ಷನ್ ಥ್ರಿಲ್ಲರ್ ಚಿತ್ರ ಏಜೆಂಟ್ ಈ ವಾರವೇ ಸೋನಿ ಲೈವ್ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸುಮಾರು 23 ತಿಂಗಳ ನಂ...