Bengaluru, ಫೆಬ್ರವರಿ 15 -- Top 10 OTT movies in India: ಭಾರತದ ಒಟಿಟಿ ಸಿನಿಮಾ ಪ್ರಿಯರಿಗೆ ಹಲವು ಒಟಿಟಿ ವೇದಿಕೆಗಳು ಹೊಸ ಹೊಸ ಸಿನಿಮಾಗಳನ್ನು ನೀಡುತ್ತಿವೆ. ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಜೀ5, ಜಿಯೋಹಾಟ್‌ಸ್ಟಾರ್‌ ಮುಂತಾದ ಒಟಿಟಿಗಳಲ್ಲಿ ಹಲವು ಸಿನಿಮಾಗಳು ಪ್ರತಿವಾರ ಬಿಡುಗಡೆಯಾಗುತ್ತಿವೆ. ಇವುಗಳಲ್ಲಿ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಗೇಮ್‌ ಚೇಂಜರ್‌, ದಿ ಮೆಹ್ತಾ ಬಾಯ್ಸ್‌ , ಮೈ ಫಾಲ್ಟ್‌: ಲಂಡನ್‌ ಸೇರಿದಂತೆ ಈ ವಾರ ಟ್ರೆಂಡಿಂಗ್‌ನಲ್ಲಿರುವ ಸಿನಿಮಾಗಳು ಯಾವುದು ಎಂದು ತಿಳಿಯೋಣ ಬನ್ನಿ. ಇವುಗಳಲ್ಲಿ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾಗಳು ಮಾತ್ರವಲ್ಲದೆ ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಸಿನಿಮಾಗಳೂ ಇವೆ.

ಈ ತಿಂಗಳು ಅಮೆಜಾನ್‌ ಪ್ರೈಮ್‌ನಲ್ಲಿ ಗೇಮ್‌ ಚೇಂಜರ್‌ ಸ್ಟ್ರೀಮಿಂಗ್‌ ಆರಂಭಿಸಿತ್ತು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಗೇಮ್ ಚೇಂಜರ್ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ...