ಭಾರತ, ಮಾರ್ಚ್ 5 -- ನೀಟ್ ಯುಜಿ 2025 ಪರೀಕ್ಷೆ ಬರೆಯುವುದಕ್ಕೆ ಅಗತ್ಯ ತಯಾರಿ ಮಾಡಬೇಕು. ಇದಕ್ಕಾಗಿ ಸೂಕ್ತ ಟೈಮ್‌ ಟೇಬಲ್‌ ಮಾಡಿಕೊಳ್ಳಿ. ಈ ವೇಳಾಪಟ್ಟಿಯಲ್ಲಿ ಸಣ್ಣ ಸಣ್ಣ ವಿರಾಮಗಳನ್ನೂ ಸೇರಿಸಿ. ಅತ್ಯುತ್ತಮ ಪರೀಕ್ಷಾ ಸಿದ್ಧತಾ ತಂತ್ರವನ್ನು ರೂಪಿಸಿಕೊಂಡು ಅನುಸರಿಸಿ.

ಹೆಚ್ಚು ಆದ್ಯತೆಯ ವಿಷಯಗಳನ್ನು ಗುರುತಿಸಿಕೊಳ್ಳಿ. ಪದೇಪದೆ ಕೇಳಲಾಗುವ ಪರಿಕಲ್ಪನೆಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ. ಅದರ ಕಡೆಗೆ ಹೆಚ್ಚಿನ ಗಮನಹರಿಸಿ

ನೀಟ್ ಪರೀಕ್ಷೆಯಲ್ಲಿ, ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರದಿಂದ ಎಂಸಿಕ್ಯೂ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೀಟ್ 2025 ಪರೀಕ್ಷೆ ಎದುರಿಸುವುದಕ್ಕಾಗಿ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಓದುವುದು ಮುಖ್ಯ. ಎನ್‌ಸಿಇಆರ್‌ಟಿ ಅಭ್ಯಾಸ ಪ್ರಶ್ನೆಗಳು ಮತ್ತು ಉದಾಹರಣೆಗಳನ್ನು ಪರಿಹರಿಸಿ. ಈ ಪ್ರಶ್ನೆಗಳು ಪದೇಪದೆ ನೀಟ್ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುತ್ತಿವೆ.

ನೀಟ್ ಪರೀಕ್ಷೆ ಒಟ್ಟು 720 ಅಂಕಗಳದ್ದು. ಆದ್ದರಿಂದ ಕಳೆದ ವರ್ಷದ ಕೆಲವು ಪ್ರಶ್ನೆ ಪತ್ರಿಕೆಗಳನ್ನು ಸೂಕ್ಷ್ಮವಾಗಿ ಅವಲೋಕನ...